ADVERTISEMENT

‘ಸಹಕಾರದ ನೆಲೆ ಆಗಲಿ ಬಾಹ್ಯಾಕಾಶ’

ಪಿಟಿಐ
Published 4 ಏಪ್ರಿಲ್ 2018, 19:30 IST
Last Updated 4 ಏಪ್ರಿಲ್ 2018, 19:30 IST

ವಿಶ್ವಸಂಸ್ಥೆ: ಬಾಹ್ಯಾಕಾಶ ಆಧರಿತ ಸ್ವತ್ತುಗಳ ರಕ್ಷಣೆ ಮತ್ತು ಭದ್ರತೆಯ ಸಾಮೂಹಿಕ ಯತ್ನಗಳನ್ನು ಬಲಪಡಿಸಲು ಕರೆ ನೀಡುತ್ತಿರುವ ಹೊತ್ತಿನಲ್ಲಿ ಸಂಘರ್ಷಗಳು ಎದುರಾಗಬಾರದು ಎಂದು ಭಾರತ ಪ್ರತಿಪಾದಿಸಿದೆ.

ವಿಶ್ವಸಂಸ್ಥೆಯ ನಿಶ್ಶಸ್ತ್ರೀಕರಣ ಆಯೋಗದ ಚರ್ಚೆಯಲ್ಲಿ ಮಂಗಳವಾರ ಭಾಗವಹಿಸಿದ್ದ ಭಾರತದ ಪ್ರತಿನಿಧಿ ರಚಿತಾ ಭಂಡಾರಿ, ‘ಬಾಹ್ಯಾಕಾಶವು ಪರಸ್ಪರ ಸಹಕಾರ ವಿಸ್ತರಣೆಯ ನೆಲೆಯಾಗಬೇಕೇ ಹೊರತು ಶಸ್ತ್ರಾಸ್ತ್ರ ಸಂಘರ್ಷಕ್ಕೆ ದಾರಿಯಾಗಬಾರದು ಎಂಬುದು ಭಾರತದ ನಂಬಿಕೆ’ ಎಂದಿದ್ದಾರೆ.

‘ಬಾಹ್ಯಾಕಾಶ ಕ್ಷೇತ್ರದ ವ್ಯವಹಾರದಲ್ಲಿ ಯಾವುದೇ ಕಾನೂನು ಕಟ್ಟಳೆಗಳಿಂದ ಸಿಗದ ಯಶಸ್ಸು, ಪಾರದರ್ಶಕತೆ ಮತ್ತು ವಿಶ್ವಾಸ ವೃದ್ಧಿಯಿಂದ ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.