ADVERTISEMENT

ಹಿಜಾಬ್ ಧರಿಸಿ ಬಾಸ್ಕೆಟ್‍‍ಬಾಲ್ ಆಡಬಾರದೆಂದು ಬಾಲಕಿಗೆ ತಾಕೀತು

ಪಿಟಿಐ
Published 19 ಮಾರ್ಚ್ 2017, 14:06 IST
Last Updated 19 ಮಾರ್ಚ್ 2017, 14:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಹಿಜಾಬ್ ಧರಿಸಿ ಬಾಸ್ಕೆಟ್‍ಬಾಲ್ ಆಡಬಾರದೆಂದು 16ರ ಹರೆಯದ ಬಾಲಕಿಗೆ ತಾಕೀತು ನೀಡಿ, ಪಂದ್ಯದಿಂದ ಕೈಬಿಡಲಾಗಿದೆ.

ಅಮೆರಿಕದ ಮೇರಿಲ್ಯಾಂಡ್‍ನಲ್ಲಿರುವ ವಾಟ್ಕಿನ್ಸ್ ಮಿಲ್  ಹೈಸ್ಕೂಲ್ ವಿದ್ಯಾರ್ಥಿನಿ, ಬಾಸ್ಕೆಟ್ ಬಾಲ್ ಆಟಗಾರ್ತಿ 16ರ ಹರೆಯದ  ಜೆ ನಾನ್ ಹಯೇಸ್ ಅವರಿಗೆ ಶಾಲಾ ಅಧಿಕೃತರು ಈ ರೀತಿ ತಾಕೀತು ನೀಡಿದ್ದಾರೆ.

ಬಾಸ್ಕೆಟ್‌‍ಬಾಲ್ ಕ್ರೀಡಾಕೂಟದ 24 ಪಂದ್ಯಗಳಲ್ಲಿ ಈ ಬಾಲಕಿ ಹಿಜಾಬ್ ಧರಿಸಿಯೇ ಆಟವಾಡಿದ್ದಳು .ಆದರೆ ಫೈನಲ್ ಪಂದ್ಯದಲ್ಲಿ ಈಕೆಯನ್ನು ಕೈ ಬಿಡಲಾಗಿದೆ.

ADVERTISEMENT

ಪ್ರಸ್ತುತ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುವುದಕ್ಕೆ ಹಿಜಾಬ್ ತೊಂದರೆಯಾಗುತ್ತದೆ. ಆದರೆ ಈಗ ಬೇರೆ ಯಾವ ಮಾರ್ಗವೂ ಇಲ್ಲ. ಹಾಗಾಗಿ ಆಕೆಯನ್ನು ಪಂದ್ಯದಿಂದ ಹೊರಗಿಡಲಾಗಿದೆ ಎಂದು ಕೋಚ್ ಹೇಳಿದ್ದಾರೆ.

ಶಾಲಾ ಅಧಿಕೃತರ ಈ ನಿರ್ಧಾರ ನನಗೆ ತುಂಬಾ ನೋವು ಕೊಟ್ಟಿದೆ ಎಂದು ವಿದ್ಯಾರ್ಥಿ ಹೇಳಿದ್ದಾಳೆ.

ಹೀಗೆ ಹಿಜಾಬ್ ಧರಿಸಿ ಆಟದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯದಿಂದ ವಿಶೇಷ ಅನುಮತಿ ಪಡೆಯಬೇಕಿದೆ. ಆದರೆ ಇದನ್ನು ವಿದ್ಯಾರ್ಥಿ ಗಂಭೀರವಾಗಿ ಪರಿಗಣಿಸದೆ 24 ಪಂದ್ಯಗಳನ್ನು ಆಡಿದ್ದಾಳೆ ಎಂದು ಶಾಲಾ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.