ADVERTISEMENT

ಅಫ್ಗಾನಿಸ್ತಾನ ಗುಂಡಿನ ದಾಳಿ; ಎಚ್‌ಎಎಲ್‌ಒ ಟ್ರಸ್ಟ್‌ನ 10 ಸಿಬ್ಬಂದಿ ಸಾವು

ಅಫ್ಗಾನಿಸ್ತಾನದಲ್ಲಿ ಬಂದೂಕುಧಾರಿಗಳ ಗುಂಪೊಂದು ನಡೆಸಿದ ಗುಂಡಿನ ದಾಳಿ

ಏಜೆನ್ಸೀಸ್
Published 9 ಜೂನ್ 2021, 10:00 IST
Last Updated 9 ಜೂನ್ 2021, 10:00 IST
ಅಫ್ಗಾನಿಸ್ತಾನದಲ್ಲಿ ಬಂದೂಕುಧಾರಿಗಳ ಗುಂಪೊಂದು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು                      –ಎಎಫ್‌ಪಿ ಚಿತ್ರ
ಅಫ್ಗಾನಿಸ್ತಾನದಲ್ಲಿ ಬಂದೂಕುಧಾರಿಗಳ ಗುಂಪೊಂದು ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು                      –ಎಎಫ್‌ಪಿ ಚಿತ್ರ   

ಕಾಬೂಲ್‌: ‘ಅಫ್ಗಾನಿಸ್ತಾನದ ಎಚ್‌ಎಎಲ್‌ಒ ಟ್ರಸ್ಟ್‌ನ ಮೇಲೆ ಬಂದೂಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿದ್ದು,ಇದರಲ್ಲಿ 10 ಮಂದಿ ಮೃತಪಟ್ಟಿದ್ದಾರೆ. 14 ಜನರಿಗೆ ಗಾಯಗಳಾಗಿವೆ ಎಂದು ಅಲ್ಲಿನ ಆಂತರಿಕ ಸಚಿವಾಲಯವು ಬುಧವಾರ ತಿಳಿಸಿದೆ.

‘ಉತ್ತರ ಬಾಗ್ಲಾನ್ ಪ್ರಾಂತ್ಯದಲ್ಲಿ ನಡೆದಿದ್ದ ಶಿಬಿರದ ಮೇಲೆ ಮಂಗಳವಾರ ರಾತ್ರಿ ಬಂದೂಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿದೆ. ಈ ದಾಳಿಯನ್ನು ತಾಲಿಬಾನ್ ನಡೆಸಿದೆ’ ಎಂದು ವಕ್ತಾರ ತಾರಿಖ್‌ ಅರಿಯಾನ್‌ ದೂರಿದ್ದಾರೆ.

ಆದರೆ, ತಾಲಿಬಾನ್‌ ಉಗ್ರ ಸಂಘಟನೆಯು ಈ ಆರೋಪವನ್ನು ತಳ್ಳಿ ಹಾಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.