ನ್ಯೂಯಾರ್ಕ್ : ಹೊಸವರ್ಷದ ಸಂಭ್ರಮಾಚರಣೆಗೆಂದು ಇಲ್ಲಿನ ಕ್ವೀನ್ಸ್‌ನಲ್ಲಿನ ನೈಟ್‌ಕ್ಲಬ್‌ವೊಂದರ ಮುಂದೆ ಜಮಾಯಿಸಿದ್ದವರ ಮೇಲೆ ಗುಂಪೊಂದು ಗುಂಡಿನ ದಾಳಿ ನಡೆಸಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ.
ನ್ಯೂ ಆರ್ಲಿನ್ಸ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ದಿನವೇ ಈ ಘಟನೆಯೂ ಜರುಗಿದ್ದು, ಅಮೆರಿಕದಲ್ಲಿ ಆತಂಕ ಸೃಷ್ಟಿಸಿದೆ.
ಕ್ವೀನ್ಸ್‌ನ ಅಮೆಜುರಾ ನೈಟ್‌ಕ್ಲಬ್ ಬಳಿ ಬುಧವಾರ ತಡರಾತ್ರಿ 11ರ ಸುಮಾರಿಗೆ ಈ ದಾಳಿ ನಡೆದಿದೆ. ಕಾರಿನಲ್ಲಿ ಬಂದಿದ್ದ ಮೂರರಿಂದ ನಾಲ್ವರು ಪುರುಷರು, ಕ್ಲಬ್ ಮುಂಭಾಗ ನೆರೆದಿದ್ದವರ ಮೇಲೆ 30ಕ್ಕೂ ಅಧಿಕ ಬಾರಿ ಗುಂಡು ಹಾರಿಸಿದ್ದಾರೆ. ಗಾಯಗೊಂಡವರಲ್ಲಿ ಆರು ಮಂದಿ ಯುವತಿಯರೂ ಸೇರಿದ್ದು, ಸದ್ಯಕ್ಕೆ ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ.
ಇದು ಭಯೋತ್ಪಾದಕ ಕೃತ್ಯವಲ್ಲ ಎಂಬುದಾಗಿಯೂ ಪೊಲೀಸರು ಖಚಿತಪಡಿಸಿದ್ದಾರೆ.
ಮೃತರ ಸಂಖ್ಯೆ 15ಕ್ಕೆ: ನ್ಯೂ ಆರ್ಲಿನ್ಸ್‌ನಲ್ಲಿ ಬುಧವಾರ ನಡೆದ ಭಯೋತ್ಪಾಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.