ADVERTISEMENT

ಪುಣೆಯಿಂದ ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ತೆರಳಿದ 125 ಮಂದಿ ಬಹರೇನ್ ಪ್ರಜೆಗಳು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 2:13 IST
Last Updated 19 ಏಪ್ರಿಲ್ 2020, 2:13 IST
ಮಹಾರಾಷ್ಟ್ರದ ಪುಣೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ದಿನದಿಂದ ಸಿಲುಕಿದ್ದ ಬಹರೇನ್ ಪ್ರಜೆಗಳು ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ತೆರಳಿದರು.
ಮಹಾರಾಷ್ಟ್ರದ ಪುಣೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ದಿನದಿಂದ ಸಿಲುಕಿದ್ದ ಬಹರೇನ್ ಪ್ರಜೆಗಳು ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ತೆರಳಿದರು.   

ಪುಣೆ(ಮಹಾರಾಷ್ಟ್ರ): ಲಾಕ್ ಡೌನ್ ಜಾರಿಯಾಗಿರುವ ಕಾರಣ ಪುಣೆಯಲ್ಲಿ ಸಿಲುಕಿಕೊಂಡಿದ್ದ 125 ಮಂದಿ ಬಹರೇನ್ ಪ್ರಜೆಗಳು ಶನಿವಾರ ವಿಶೇಷ ವಿಮಾನದಲ್ಲಿ ತವರಿಗೆ ಮರಳಿದ್ದಾರೆ.

ಮಾರ್ಚ್ 24ರಿಂದ ಪುಣೆಯಲ್ಲಿಯೇ ಸಿಲುಕಿಕೊಂಡಿದ್ದ ಬಹರೇನ್ ಪ್ರಜೆಗಳನ್ನು ಅವರ ತವರಿಗೆ ಕಳುಹಿಸುವುದಕ್ಕಾಗಿಯೇ ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿತ್ತು.

ಭಾರತದಲ್ಲಿ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದು ಪಡಿಸಲಾಗಿದೆ. ಆದರೂ ಬಹರೇನ್ ಪ್ರಜೆಗಳಿಗಾಗಿ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಿದ್ದು ಶನಿವಾರ ಪುಣೆಯಿಂದ ತಮ್ಮ ಲಗ್ಗೇಜುಗಳೊಂದಿಗೆಸ್ವದೇಶಕ್ಕೆ ತೆರಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.