ADVERTISEMENT

ಪಿಲಿಪೈನ್ಸ್‌: ಚರ್ಚ್‌ನಲ್ಲಿ ಭಯೋತ್ಪಾದಕರಿಂದ ಎರಡು ಬಾಂಬ್‌ ಸ್ಫೋಟ, 19 ಮಂದಿ ಸಾವು

42 ಜನ ಗಾಯ

ಏಜೆನ್ಸೀಸ್
Published 27 ಜನವರಿ 2019, 7:26 IST
Last Updated 27 ಜನವರಿ 2019, 7:26 IST
ಪಿಲಿಪೈನ್ಸ್‌ನ ಚರ್ಚ್‌ನಲ್ಲಿ ಬಾಂಬ್ ಸ್ಫೋಟವಾಗಿದ್ದು, ಭದ್ರತಾ ಸಿಬ್ಬಂದಿ ಪರಿಶೀಲನೆಯಲ್ಲಿ ತೊಡಗಿರುವುದು. ಚಿತ್ರ: ಪಿಟಿಐ
ಪಿಲಿಪೈನ್ಸ್‌ನ ಚರ್ಚ್‌ನಲ್ಲಿ ಬಾಂಬ್ ಸ್ಫೋಟವಾಗಿದ್ದು, ಭದ್ರತಾ ಸಿಬ್ಬಂದಿ ಪರಿಶೀಲನೆಯಲ್ಲಿ ತೊಡಗಿರುವುದು. ಚಿತ್ರ: ಪಿಟಿಐ   

ಮನಿಲಾ:ದಕ್ಷಿಣ ಪಿಲಿಪೈನ್ಸ್‌ನ ಮುಸ್ಲಿಮರೇ ಹೆಚ್ಚಾಗಿರುವ ದ್ವೀಪದಲ್ಲಿನ ಚರ್ಚ್‌ನಲ್ಲಿ ಬಾನುವಾರ ಎರಡು ಬಾಂಬ್‌ ಸ್ಫೋಟ ಸಂಭವಿಸಿ, ಹಿಂಸಾಚಾರದಲ್ಲಿ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಸೇರಿ 19 ಜನ ಮೃತಪಟ್ಟಿದ್ದಾರೆ ಎಂದು ಮಿಲಿಟರಿ ತಿಳಿಸಿದೆ.

ಸುಲು ಪ್ರಾಂತ್ಯದ ಜೊಲೊ ಕ್ಯಥೆಡ್ರಾಲ್‌ ಚರ್ಚ್‌ನ ಒಳಗೆ ಮೊದಲ ಬಾಂಬ್‌ ಸ್ಫೋಟಗೊಂಡಿದ್ದು, ಎರಡನೇ ಬಾಂಬ್‌ ವಾಹನಗಳ ನಿಲುಗಡೆ ಸ್ಥಳದಲ್ಲಿ ಸಂಭವಿಸಿದೆ.

ಅಬು ಸಯಯಾಫ್‌ ಭಯೋತ್ಪಾದನಾ ಗುಂಪು ಈ ದಾಳಿ ನಡೆಸಿದೆ ಎನ್ನಲಾಗಿದೆ.

ADVERTISEMENT

ಬಾಂಬ್‌ ದಾಳಿಯಲ್ಲಿ ಐವರು ಸೈನಿಕರು ಹಾಗೂ 12 ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಶಸ್ತ್ರ ಪಡೆಗಳ ವಕ್ತಾರ ಎಡ್ಗಾರ್ಡ್‌ ಅರೆವಾಲೊ ಅವರು ಡಿಜೆಎಂಎಂ ರೆಡಿಯೊಕ್ಕೆ ತಿಳಿಸಿದ್ದಾರೆ.

ದೇಶದಲ್ಲಿ ಸರ್ಕಾರ ಮತ್ತು ಅಬು ಸಯಯಾಫ್‌ ಮುಸ್ಲಿಂ ಪ್ರತ್ಯೇಕವಾದಿಗಳ ಗುಂಪುಗಳ ಮಧ್ಯೆ ಹೋರಾಟ ನಡೆಯುತ್ತಿದೆ.

ಪಿಲಿಪೈನ್ಸ್‌ನ ಚರ್ಚ್‌ನಲ್ಲಿ ಬಾಂಬ್ ಸ್ಫೋಟವಾಗಿ ವಸ್ತುಗಳು ಹಾನಿಗೊಳಗಾಗಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.