ADVERTISEMENT

ಪ್ಯಾರಿಸ್‌: ಗುಂಡಿನ ದಾಳಿ- ಇಬ್ಬರ ಸಾವು

ಏಜೆನ್ಸೀಸ್
Published 23 ಡಿಸೆಂಬರ್ 2022, 13:25 IST
Last Updated 23 ಡಿಸೆಂಬರ್ 2022, 13:25 IST
ಸಂಗ್ರಹ ಚಿತ್ರ (ಎಪಿಎಫ್‌)
ಸಂಗ್ರಹ ಚಿತ್ರ (ಎಪಿಎಫ್‌)   

ಪ್ಯಾರಿಸ್‌: ಇಲ್ಲಿಯ ಸೆಂಟ್ರಲ್‌ ಭಾಗದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 69 ವರ್ಷದ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಗುಂಡಿನ ದಾಳಿಗೆ ತಕ್ಷಣಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಭಯೋತ್ಪಾದನಾ ತಡೆ ಅಧಿಕಾರಿಗಳು ಈಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಗೊತ್ತಾಗಿದೆ.

ಸದ್ಯ ಪ್ಯಾರಿಸ್‌ನ ಹತ್ತನೇ ಅರೋಂಡಿಸ್ಮೆಂಟ್‌ ಪ್ರದೇಶದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಸಾರ್ವಜನಿಕರಿಗೆ ಮನೆಯಿಂದ ಆಚೆ ಬರದಂತೆ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.