
ಪಿಟಿಐ
ಕೀವ್: ಉಕ್ರೇನ್‌ನ ಒಡೆಸಾ ಪ್ರಾಂತ್ಯದ ಮೇಲೆ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ದೇಶದ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ರಷ್ಯಾ ತನ್ನ ದಾಳಿ ಮುಂದುವರಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ಭಾನುವಾರ ಹೇಳಿದರು.
ಒಡೆಸಾದ ಕಾರು ನಿಲುಗಡೆ ಸ್ಥಳದ ಮೇಲೆ ಭಾನುವಾರ ಮುಂಜಾನೆ ರಷ್ಯಾ ಡ್ರೋನ್ ದಾಳಿ ನಡೆಸಿತು.
ಝಪೊರಿಝಿಯಾ ಪ್ರದೇಶದ ಮೇಲೆ ರಾತ್ರಿಯಿಡೀ ಡ್ರೋನ್ ಹಾಗೂ ಕ್ಷಿಪಣಿಗಳಿಂದ ರಷ್ಯಾ ದಾಳಿ ನಡೆಸಿತು. ಹೀಗಾಗಿ ಈ ಪ್ರದೇಶದಲ್ಲಿ ದೀರ್ಘ ಸಮಯದವರೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
‘ದಾಳಿ ವೇಳೆ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಸುಮಾರು 60,000 ಜನರು ವಿದ್ಯುತ್ ವ್ಯತ್ಯಯದಿಂದ ಸಮಸ್ಯೆ ಅನುಭವಿಸಿದ್ದಾರೆ’ ಎಂದು ಝಪೊರಿಝಿಯಾ ಗವರ್ನರ್ ಇವಾನ್ ಫೆಡೊರೊವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.