ಸಿಯೊಲ್: ದೇಶದಿಂದ ದಕ್ಷಿಣಕೊರಿಯಾಗೆ ಪಲಾಯನ ಮಾಡಿದ್ದ20 ಮಂದಿ ಕಳೆದ ಐದು ವರ್ಷಗಳಿಂದ ವಿದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ಉತ್ತರ ಕೊರಿಯಾದ ಏಕೀಕರಣ ಸಚಿವಾಲಯ ಸೋಮವಾರ ತಿಳಿಸಿದೆ.
'ಉತ್ತರ ಕೊರಿಯಾದಿಂದ ಓಡಿಹೋಗಿ,ಇತ್ತೀಚಿನ ಐದು (2016-20) ವರ್ಷಗಳಲ್ಲಿ ವಿದೇಶಗಳಿಗೆ ಪಲಾಯನ ಮಾಡಿದವರ ಸಂಖ್ಯೆ ಒಟ್ಟು 20ಕ್ಕೇರಿದೆ' ಎಂದು ಸಚಿವಾಲಯದ ವಕ್ತಾರ ಲೀ ಜಾಂಗ್-ಜೋ ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ ವೇಳೆಗೆ ಉತ್ತರ ಕೊರಿಯಾದ ಒಟ್ಟು33,800 ಜನರು ದಕ್ಷಿಣ ಕೊರಿಯಾಗೆ ಪಲಾಯನ ಮಾಡಿದ್ದಾರೆ ಎಂದೂ ಸಚಿವಾಲಯ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.