ADVERTISEMENT

ಢಾಕಾ: ಇಸ್ಕಾನ್‌ ದೇಗುಲದಲ್ಲಿದ್ದ 31 ಮಂದಿಗೆ ಸೋಂಕು

ಪಿಟಿಐ
Published 26 ಏಪ್ರಿಲ್ 2020, 21:59 IST
Last Updated 26 ಏಪ್ರಿಲ್ 2020, 21:59 IST
ಸಾಂದರ್ಭಿಕ ಚಿತ್‌ರ
ಸಾಂದರ್ಭಿಕ ಚಿತ್‌ರ   

ಢಾಕಾ: ಸ್ವಾಮಿಬಾಗ್‌ ಪ್ರದೇಶದಲ್ಲಿರುವ ಇಸ್ಕಾನ್ ದೇವಸ್ಥಾನದಲ್ಲಿದ್ದ 31 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ.

ಬಾಂಗ್ಲಾದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ವರದಿಯಾದ ಸಂದರ್ಭದಲ್ಲಿಯೇ ಇಸ್ಕಾನ್‌ ದೇವಸ್ಥಾನವನ್ನು ಬಂದ್‌ ಮಾಡಲಾಗಿತ್ತು. ‘ಸೋಂಕಿತರನ್ನು ಐಸೋಲೇಷನ್ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದೇವಸ್ಥಾನಕ್ಕೆ ತೆರಳುವ ರಸ್ತೆಗಳಲ್ಲಿ ನಿರ್ಬಂಧ ವಿಧಿಸಲಾಗಿದೆ’ ಎಂದು ಗೆಂಡಾರಿಯಾ ಪೊಲೀಸ್ ಠಾಣೆ ಅಧಿಕಾರಿ ಸಾಜು ಮಿಯಾ ತಿಳಿಸಿದ್ದಾರೆ.

‘ಇಸ್ಕಾನ್‌ ಪ್ರವೇಶಕ್ಕೆ ಹೊರಗಿನವರಿಗೆ ಅನುಮತಿ ನೀಡಿರಲಿಲ್ಲ. ಹೀಗಿದ್ದರೂ, ಇಷ್ಟೊಂದು ಜನರಿಗೆ ಸೋಂಕು ತಗುಲಿರುವುದು ಹೇಗೆ ಎಂಬುದು ತಿಳಿಯುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ADVERTISEMENT

ಅರ್ಚಕರು, ಸಿಬ್ಬಂದಿ ಮತ್ತು ಭಕ್ತರು ಸೇರಿದಂತೆ ನೂರು ಮಂದಿ ದೇವಸ್ಥಾನದಲ್ಲಿ ಇದ್ದರು ಎನ್ನಲಾಗಿದೆ. ಇಲ್ಲಿಯವರೆಗೆ ಬಾಂಗ್ಲಾದಲ್ಲಿ 5,000 ಕೊರೊನಾ ಸೋಂಕಿತರಿದ್ದು, 140 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.