ADVERTISEMENT

ಲಂಡನ್ ಬಳಿ ಲಾರಿ ಕಂಟೇನರ್‌ನಲ್ಲಿ 39 ಮೃತದೇಹ ಪತ್ತೆ 

ಏಜೆನ್ಸೀಸ್
Published 23 ಅಕ್ಟೋಬರ್ 2019, 11:06 IST
Last Updated 23 ಅಕ್ಟೋಬರ್ 2019, 11:06 IST
ಲಾರಿ ಕಂಟೇನರ್
ಲಾರಿ ಕಂಟೇನರ್   

ಲಂಡನ್:ಲಂಡನ್ ಬಳಿಬುಧವಾರ ಬೆಳಗ್ಗೆ ಲಾರಿ ಕಂಟೇನರ್ ಒಳಗೆ 39 ಮೃತದೇಹಗಳು ಪತ್ತೆಯಾಗಿದ್ದು ತನಿಖೆ ಆರಂಭಿಸಿದ ಪೊಲೀಸರುಮಾನವ ಕಳ್ಳಸಾಗಣೆ ಶಂಕೆ ವ್ಯಕ್ತಪಡಿಸಿದ್ದಾರೆ.

ಗ್ರೈಸ್ ಈಸ್ಟರ್ನ್ ಅವೆನ್ಯೂ ಬಳಿ ವಾಟರ್‌ಗ್ಲೇಡ್ ಇಂಡಸ್ಟ್ರಿಯಲ್ ಪಾರ್ಕ್‌ನಲ್ಲಿ ನಿಂತಿದ್ದ ಲಾರಿ ಕಂಟೇನರ್ ಒಳಗೆ ಮೃತದೇಹ ಪತ್ತೆಯಾಗಿರುವ ಬಗ್ಗೆ ರಾತ್ರಿ 1.40ಕ್ಕೆ ಆ್ಯಂಬುಲೆನ್ಸ್ ಸೇವೆಯಲ್ಲಿದ್ದ ಸಹೋದ್ಯೋಗಿಗಳು ತಿಳಿಸಿದರು ಎಂದು ಎಸ್ಸೆಕ್ಸ್ ಪೊಲೀಸರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಐರ್‌ಲೆಂಡ್‌ನ 25ರ ಹರೆಯದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ADVERTISEMENT

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಚೀಫ್ ಸುಪರಿಟೆಂಡೆಂಟ್ ಆಂಡ್ರ್ಯೂ ಮರಿನರ್, ಇಷ್ಟೊಂದು ಜನರು ಸಾವಿಗೀಡಾಗಿರುವುದು ದುರಂತ. ಅಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಹಂತಕರನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಆದಾಗ್ಯೂ ಇದು ಸುದೀರ್ಘ ಪ್ರಕ್ರಿಯೆ ಎಂದಿದ್ದಾರೆ.

ಬಲ್ಗೇರಿಯದಿಂದ ಬಂದ ಈ ಲಾರಿ ಅಕ್ಟೋಬರ್ 19 ಶನಿವಾರದಂದು ಹೋಲಿಹೆಡ್ ದಾರಿಯಾಗಿ ಇಂಗ್ಲೆಂಡ್ ಪ್ರವೇಶಿಸಿತ್ತು. ನಾವು ಈಗಾಗಲೇ ಲಾರಿ ಚಾಲಕನನ್ನುಬಂಧಿಸಿದ್ದು, ವಿಚಾರಣೆ ಮುಂದವರಿದಿದೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಬೋರಿಸ್ ಜಾನ್ಸನ್, ಎಸ್ಸೆಕ್ಸ್‌ನಲ್ಲಿ ನಡೆದ ಭೀಕರ ಘಟನೆ ಭಯ ಹುಟ್ಟಿಸುತ್ತಿದೆ. ಗೃಹ ಸಚಿವಾಲಯದಿಂದ ಮತ್ತು ಎಸ್ಸೆಕ್ಸ್ ಪೊಲೀಸರಿಂದ ನಾನು ಮಾಹಿತಿ ಪಡೆಯುತ್ತಿದ್ದೇನೆ. ಪ್ರಾಣ ಕಳೆದುಕೊಂಡಿರುವ ಜನರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.