ADVERTISEMENT

ಪ್ಯಾರಿಸ್‌ನಲ್ಲಿ ಚೂರಿ ಇರಿತ: ನಾಲ್ವರಿಗೆ ಗಾಯ, ಒಬ್ಬನ ಬಂಧನ

ಏಜೆನ್ಸೀಸ್
Published 25 ಸೆಪ್ಟೆಂಬರ್ 2020, 16:06 IST
Last Updated 25 ಸೆಪ್ಟೆಂಬರ್ 2020, 16:06 IST
ಚೂರಿ ಇರಿತದಿಂದ ನಾಲ್ವರು ಗಾಯಗೊಂಡ ಘಟನೆಯ ಆರೋಪಿ ಎನ್ನಲಾದ ವ್ಯಕ್ತಿಯನ್ನು ಪ್ಯಾರಿಸ್‌ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ  – ಎಎಫ್‌ಪಿ ಚಿತ್ರ
ಚೂರಿ ಇರಿತದಿಂದ ನಾಲ್ವರು ಗಾಯಗೊಂಡ ಘಟನೆಯ ಆರೋಪಿ ಎನ್ನಲಾದ ವ್ಯಕ್ತಿಯನ್ನು ಪ್ಯಾರಿಸ್‌ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ  – ಎಎಫ್‌ಪಿ ಚಿತ್ರ   

‍ಪ್ಯಾರಿಸ್‌: ಫ್ರಾನ್ಸ್‌ನ ಜನಪ್ರಿಯ ವಿಡಂಬನಾತ್ಮಕ ನಿಯತಕಾಲಿಕೆ ‘ಚಾರ್ಲಿ ಹೆಬ್ಡೊ’ ನಗರದಲ್ಲಿ ಈ ಮೊದಲು ಕಾರ್ಯಾಚರಣೆ ನಡೆಸುತ್ತಿದ್ದ ಕಚೇರಿ ಬಳಿ ವ್ಯಕ್ತಿಯೊಬ್ಬ ಚೂರಿಯಿಂದ ಇರಿದ ಕಾರಣ ನಾಲ್ವರು ಶುಕ್ರವಾರ ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ಯಾರಿಸ್‌ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.

‘ಚೂರಿ ಇರಿತಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಇಬ್ಬರು ಈ ಕೃತ್ಯ ಎಸಗಿರಬಹುದು ಎಂದು ಈ ಮೊದಲು ಶಂಕಿಸಲಾಗಿತ್ತು. ಆದರೆ, ಒಬ್ಬ ವ್ಯಕ್ತಿಯೇ ಚೂರಿಯಿಂದ ಇರಿದದ್ದು ಎಂಬುದು ತನಿಖೆಯಿಂದ ಗೊತ್ತಾಯಿತು. ಪ್ಯಾರಿಸ್‌ನ ಪೂರ್ವದಲ್ಲಿನ ಬ್ಯಾಸಿಲ್ಲೆ ಪ್ಲಾಜಾದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ‘ ಎಂದೂ ಪೊಲೀಸರು ತಿಳಿಸಿದ್ದಾರೆ.

2015ರಲ್ಲಿ ಭಯೋತ್ಪಾದಕ ಸಂಘಟನೆ ಐಎಸ್‌ಗೆ ಸೇರಿದ ಕೆಲವು ಉಗ್ರರು ಚಾರ್ಲಿ ಹೆಬ್ಡೊ ಪತ್ರಿಕೆ ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ಘಟನೆ ನಂತರ ಪತ್ರಿಕೆ ತನ್ನ ಕಚೇರಿಯನ್ನು ಸ್ಥಳಾಂತರ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.