ADVERTISEMENT

ಚೀನಾದಿಂದ ಎರಡು ದಶಕದಲ್ಲಿ ಐದು ಪಿಡುಗು

ಇದು ಕೊನೆಗೊಳ್ಳಬೇಕು: ಅಮೆರಿಕ ಎನ್ಎಸ್‌ಎ ಗುಡುಗು

ಪಿಟಿಐ
Published 13 ಮೇ 2020, 19:30 IST
Last Updated 13 ಮೇ 2020, 19:30 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ವಾಷಿಂಗ್ಟನ್‌: ಕಳೆದ ಇಪ್ಪತ್ತು ವರ್ಷಗಳಲ್ಲಿ ಚೀನಾದಲ್ಲಿ ಕಾಣಿಸಿಕೊಂಡಿರುವ ಐದು ಪಿಡುಗುಗಳು ಜಗತ್ತಿಗೇ ಹರಡಿ, ಜನರನ್ನು ಕಾಡಿವೆ. ಇಂಥದ್ದಕ್ಕೆ ಒಂದಿಲ್ಲೊಂದು ದಿನ ಕೊನೆ ಹಾಡಲೇಬೇಕು ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ರಾಬರ್ಟ್‌ ಓಬ್ರಿಯಾನ್‌ ಗುಡುಗಿದ್ದಾರೆ.

ಜಾಗತಿಕವಾಗಿ 2.5 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿರುವ ಕೊರೊನಾ ವೈರಸ್‌ ಸೋಂಕು ಎಲ್ಲೆಡೆ ವ್ಯಾಪಿಸಲು ಚೀನಾ ಕಾರಣ ಎಂಬ ಅಮೆರಿಕದ ಆರೋಪವನ್ನು ಅವರು ಪುನರುಚ್ಚರಿಸಿದ್ದಾರೆ.

‘ಈ ವೈರಾಣು ಪ್ರಯೋಗಾಲಯದಿಂದ ಅಥವಾ ಮಾಂಸ ಮಾರುಕಟ್ಟೆಯಿಂದ ಬಂದಿರಬಹುದು. ಆದರೆ, ಚೀನಾದ ವುಹಾನ್‌ ನಗರವೇ ಇದರ ಮೂಲ. ಸಾಂದರ್ಭಿಕ ಪುರಾವೆಗಳು ಸಹ ಚೀನಾದತ್ತಲೇ ಬೊಟ್ಟು ಮಾಡುತ್ತವೆ. ಹೀಗಾಗಿ ಇಂತಹ ಮಹಾಮಾರಿಗಳನ್ನು ಮತ್ತೊಮ್ಮೆ ವ್ಯಾಪಿಸುವಂತೆ ಮಾಡಬೇಡಿ ಎಂದು ಜಗತ್ತಿನ ಎಲ್ಲ ಜನರು ಚೀನಾಕ್ಕೆ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.