ADVERTISEMENT

ತಾಲಿಬಾನ್‌ ಉಗ್ರರ ಚಟುವಟಿಕೆ ಆರಂಭ: ಅಫ್ಘಾನಿಸ್ತಾನ‌ ಸೇನೆಯಿಂದ 5 ಉಗ್ರರ ಹತ್ಯೆ

ಏಜೆನ್ಸೀಸ್
Published 17 ಆಗಸ್ಟ್ 2020, 1:31 IST
Last Updated 17 ಆಗಸ್ಟ್ 2020, 1:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನ್‌ ಉಗ್ರರ ಚಟುವಟಿಕೆಗಳು ಆರಂಭವಾಗಿದ್ದು ಮಹತ್ವದ ಕಾರ್ಯಾಚರಣೆಯಲ್ಲಿ ಅಫ್ಘನ್‌ ಸೇನೆ ಐವರು ಉಗ್ರರನ್ನು ಹತ್ಯೆ ಮಾಡಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಮೂವರು ಅಫ್ಘನ್‌ ಯೋಧರು ಹಾಗೂ ಒಬ್ಬ ನಾಗರೀಕ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯದಲ್ಲಿರುವ ದಂಗಮ್ ಜಿಲ್ಲೆಯ ಗಡಿಯಲ್ಲಿರುವ ಭದ್ರತಾ ತಪಾಸಣಾ ಕೇಂದ್ರಗಳ ಮೇಲೆ ತಾಲಿಬಾನ್‌ ಉಗ್ರರ ಗುಂಪು ಏಕಾಏಕಿ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಯೋಧರು ಪ್ರತಿದಾಳಿ ನಡೆಸಿದ್ದಾರೆ. ನಂತರ ಮುಂದುವರೆದ ಕಾರ್ಯಾಚರಣೆಯಲ್ಲಿ ಐವರು ತಾಲಿಬಾನ್‌ ಉಗ್ರರು ಹತರಾಗಿದ್ದಾರೆ.

ADVERTISEMENT

ದಂಗಮ್ ಗಡಿಯಲ್ಲಿ ಉಗ್ರರು ಅಡಗಿದ್ದು ಅವರ ವಿರುದ್ಧದ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದ ಅಫ್ಘನ್‌ ಸೇನೆ ಹೇಳಿದೆ. ಇದುವರೆಗೂ ತಾಲಿಬಾನ್‌ ಉಗ್ರ ಸಂಘಟನೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.