ADVERTISEMENT

ಮಾಲಿ ಉಗ್ರರಿಂದ ವಿಶ್ವಸಂಸ್ಥೆಯ 7 ಶಾಂತಿಪಾಲಕರ ಭೀಕರ ಹತ್ಯೆ

ಪಿಟಿಐ
Published 9 ಡಿಸೆಂಬರ್ 2021, 3:09 IST
Last Updated 9 ಡಿಸೆಂಬರ್ 2021, 3:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಶ್ವಸಂಸ್ಥೆ: ಪಶ್ಚಿಮ ಆಫ್ರಿಕಾದ ಮಾಲಿಯಲ್ಲಿ ಸೇವಾ ಚಟುವಟಿಕೆಯಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ಏಳು ಶಾಂತಿಪಾಲಕರು ಮರಣ ಹೊಂದಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟಿಫನ್ ಡುಜಾರಿಕ್ ತಿಳಿಸಿದ್ದಾರೆ.

ಟೊಗೊದಿಂದ ಬಂದಿದ್ದ ಶಾಂತಿಪಾಲನಾ ತಂಡಬುಧವಾರ ಮಾಲಿಯ ಬಾಂಡೈಗ್ರಾ ಪ್ರಾಂತ್ಯದಲ್ಲಿ ಡೌಂಟ್ಜಾದಿಂದ ಸಿವೆರಾಕ್ಕೆ ವಾಹನದಲ್ಲಿ ತೆರಳುತಿತ್ತು. ಈ ವೇಳೆಸಿವೆರಾ ಬಳಿ ಸುಧಾರಿತ ಸ್ಪೋಟಕದಿಂದ ಉಗ್ರರು ವಾಹನವನ್ನು ಸ್ಪೋಟಿಸಿ ಶಾಂತಿಪಾಲಕರನ್ನು ಕೊಂದಿದ್ದಾರೆ.

ADVERTISEMENT

‘ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಮೇಲೆ ನಡೆದ ಅತಿದೊಡ್ಡ ದಾಳಿ ಇದು’ ಎಂದುಸ್ಟಿಫನ್ ಡುಜಾರಿಕ್ ತಿಳಿಸಿದ್ದಾರೆ.

‘ದಾಳಿ ಮಾಡಿದವರನ್ನು ಪತ್ತೆ ಮಾಡಿ. ಸೂಕ್ತ ಕ್ರಮ ಕೈಗೊಳ್ಳಿ’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟೋನಿಯೊ ಗುಟೇರಸ್ ಮಾಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಆಲ್ ಖೈದಾ ಬೆಂಬಲಿತ ಉಗ್ರಗಾಮಿಗಳು 2015 ರಿಂದ ಮಾಲಿ ಸೇನೆಯ ಜೊತೆ ನಿರಂತರ ಕದನಗಳನ್ನು ನಡೆಸುತ್ತಿದ್ದು, ಅಲ್ಲಿನ ನಾಗರಿಕರಿಗೂ ಉಪಟಳ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.