ADVERTISEMENT

ಮಸೀದಿಗಳ ಮೇಲಿನ ದಾಳಿ ಆರೋಪಿ ವಿರುದ್ಧ 89 ಪ್ರಕರಣ

ಏಜೆನ್ಸೀಸ್
Published 4 ಏಪ್ರಿಲ್ 2019, 18:41 IST
Last Updated 4 ಏಪ್ರಿಲ್ 2019, 18:41 IST
   

ವೆಲ್ಲಿಂಗ್ಟನ್‌: ಕ್ರೈಸ್ಟ್‌ಚರ್ಚ್‌ನಮಸೀದಿಗಳ ಮೇಲೆ ದಾಳಿ ನಡೆಸಿದ ಆರೋಪಿ ವಿರುದ್ಧ 50 ಕೊಲೆ ಪ‍್ರಕರಣ ಮತ್ತು ಕೊಲೆಗೆ ಯತ್ನಿಸಿದ 39 ಆರೋಪಗಳನ್ನು ಹೊರಿಸಲಾಗಿದೆ.

ಆರೋಪಿ ಆಸ್ಟ್ರೇಲಿಯಾದ ಬ್ರೆಂಟನ್‌ ಹ್ಯಾರ್ರಿಸನ್‌ ಟರ್ರಂಟ್‌ನನ್ನು (28) 2ನೇ ಬಾರಿನ್ಯಾಯಾಲಯದ ಮುಂದೆ ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ 15ರಂದು ಮಸೀದಿಗಳ ಮೇಲೆ ನಡೆದ ದಾಳಿಯಲ್ಲಿ 50 ಮಂದಿ ಸಾವಿಗೀಡಾಗಿದ್ದರು ಮತ್ತು 50 ಮಂದಿ ಗಾಯಗೊಂಡಿದ್ದರು.ದಾಳಿ ಗಂಭೀರ ಸ್ವರೂಪದ್ದಾಗಿರುವುದರಿಂದ ಹೈಕೋರ್ಟ್‌ಗೆ ಪ್ರಕರಣವನ್ನು ವರ್ಗಾಯಿಸಲಾಗಿದೆ. ಸದ್ಯ ಟರ್ರಂಟನನ್ನು ಭಾರೀ ಭದ್ರತೆ ಹೊಂದಿರುವ ಆಕ್ಲ್ಯಾಂಡ್‌ ಕಾರಾಗೃಹದಲ್ಲಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.