ADVERTISEMENT

ಇಂಡೊನೇಷ್ಯಾ ಕಲ್ಲಿದ್ದಲು ಗಣಿ ಸ್ಫೋಟ: 9 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 13:45 IST
Last Updated 9 ಡಿಸೆಂಬರ್ 2022, 13:45 IST
ಸವಲುಂಟೊ ಜಿಲ್ಲೆಯ ಖಾಸಗಿ ಗಣಿಯಲ್ಲಿ ಶುಕ್ರವಾರ ಸಂಭವಿಸಿದ್ದ ಗಣಿ ಸ್ಫೋಟದ ನಂತರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ತಂಡ. –ಎಎಫ್‌ಪಿ ಚಿತ್ರ
ಸವಲುಂಟೊ ಜಿಲ್ಲೆಯ ಖಾಸಗಿ ಗಣಿಯಲ್ಲಿ ಶುಕ್ರವಾರ ಸಂಭವಿಸಿದ್ದ ಗಣಿ ಸ್ಫೋಟದ ನಂತರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ತಂಡ. –ಎಎಫ್‌ಪಿ ಚಿತ್ರ   

ಜಕಾರ್ತ, ಇಂಡೊನೇಷ್ಯಾ: ಇಂಡೊನೇಷ್ಯಾದ ಸುಮಾರ್ತ ಪ್ರಾಂತ್ಯದ ಸವಲುಂಟೊ ಜಿಲ್ಲೆಯಲ್ಲಿರುವ ಖಾಸಗಿ ಒಡೆತನದ ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ 9 ಗಣಿ ಕಾರ್ಮಿಕರು ಮೃತರಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.

ಕಾಣೆಯಾದ ಒಬ್ಬರಿಗಾಗಿ ಸ್ಥಳೀಯ ರಕ್ಷಣಾ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಗಣಿಯಲ್ಲಿ ಮೀಥೇನ್‌ ಹಾಗೂ ಹಾನಿಕಾರಕ ಅನಿಲಗಳಿಂದ ಸ್ಫೋಟ ಸಂಭವಿಸಿದ್ದು, ಒಟ್ಟು 12 ಕಾರ್ಮಿಕರು ಇದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT