ADVERTISEMENT

ಪಪುವಾ ನ್ಯೂಗಿನಿಯಲ್ಲಿ ಭೂಕಂಪ: ಕನಿಷ್ಠ ಮೂವರು ಸಾವು

ಏಜೆನ್ಸೀಸ್
Published 25 ಮಾರ್ಚ್ 2024, 13:42 IST
Last Updated 25 ಮಾರ್ಚ್ 2024, 13:42 IST
ಭೂಕಂಪದಿಂದಾಗಿ ಪಪುವಾ ನ್ಯೂಗಿನಿಯ ಪೂರ್ವ ಸೆಪಿಕ್‌ ಪ್ರಾಂತ್ಯದಲ್ಲಿಯ ತಾತ್ಕಾಲಿಕ ಸೇತುವೆಗೆ ಹಾನಿಯಾಗಿರುವುದು –ಎಪಿಎಪ್‌ ಚಿತ್ರ
ಭೂಕಂಪದಿಂದಾಗಿ ಪಪುವಾ ನ್ಯೂಗಿನಿಯ ಪೂರ್ವ ಸೆಪಿಕ್‌ ಪ್ರಾಂತ್ಯದಲ್ಲಿಯ ತಾತ್ಕಾಲಿಕ ಸೇತುವೆಗೆ ಹಾನಿಯಾಗಿರುವುದು –ಎಪಿಎಪ್‌ ಚಿತ್ರ    

ಪೋರ್ಟ್‌ ಮೊರೆಸ್‌ಬಿ: ಪಪುವಾ ನ್ಯೂಗನಿಯ ಪಶ್ಚಿಮ ಭಾಗದಲ್ಲಿ 6.9 ಕಂಪನಾಂಕ ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಮತ್ತು ಸುಮಾರು 1 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಸೆಪಿಕ್‌ ಪ್ರಾಂತ್ಯದ ಅಂಬುಂಟಿ ಪಟ್ಟಣದ ಬಳಿ ಭಾನುವಾರ ಸುಮಾರು 6.30ಕ್ಕೆ ಭೂಕಂಪ ಸಂಭವಿಸಿದೆ. ಸುಮಾರು 40 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

‘ಮಾರ್ಚ್‌ ಆರಂಭದಲ್ಲಿ ಸಂಭವಿಸಿದ್ದ ಪ್ರವಾಹದಿಂದ ಈ ಪ್ರದೇಶವು ತತ್ತರಿಸಿತ್ತು. ಈ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿಯು ಸಾಮಾನ್ಯವಾದ್ದರಿಂದ ಜನರು ಅದಕ್ಕೆ ತಯಾರಿರುತ್ತಾರೆ. ಆದರೆ, ಭೂಕಂಪವು ಇಲ್ಲಿಯ ಜನರಿಗೆ ಹೊಸದು. ಇದು ಹೆಚ್ಚಿನ ಹಾನಿ ಉಂಟುಮಾಡಿರುವ ಸಾಧ್ಯತೆ ಇದೆ’ ಎಂದು ಪೂರ್ವ ಸೆಪಿಕ್‌ ಗವರ್ನರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.   

ADVERTISEMENT

ಕಳೆದ ವರ್ಷ ಏಪ್ರಿಲ್‌ನಲ್ಲೂ ಪಪುವಾ ನ್ಯೂಗಿನಿಯಲ್ಲಿ ಎರಡು ಬಾರಿ ಪ್ರಬಲ ಭೂಕಂಪಗಳು ಸಂಭವಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.