ADVERTISEMENT

ಅಮೆರಿಕದಲ್ಲಿ ಕನ್ನಡತಿ ವೈದ್ಯೆಗೆ ವಿಶಿಷ್ಟ ಗೌರವ

ಅಮೆರಿಕದ ನ್ಯೂಜೆರ್ಸಿಯಲ್ಲಿ ಕೊರೊನಾ ಪೀಡಿತರಿಗೆ ಆರೈಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2020, 1:54 IST
Last Updated 7 ಮೇ 2020, 1:54 IST
ಡಾ.ಯಾಸ್ಮಿನ್‌
ಡಾ.ಯಾಸ್ಮಿನ್‌   

ಬೆಂಗಳೂರು: ಅಮೆರಿಕದ ನ್ಯೂಜೆರ್ಸಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ನಗರದ ಬನಶಂಕರಿಯ ಕದಿರೇನಹಳ್ಳಿ ಕ್ರಾಸ್‌ ನಿವಾಸಿ ಡಾ.ಯಾಸ್ಮಿನ್‌ ಸುಲ್ತಾನ ಅವರು ನೂರಾರು ಕೊರೊನಾ ಸೋಂಕಿತರಿಗೆ ಆರೈಕೆ ಮಾಡಿ ಅವರನ್ನು ಗುಣಮುಖರನ್ನಾಗಿ ಮಾಡಿದ್ದಕ್ಕಾಗಿ ಅಲ್ಲಿನ ನಾಗರಿಕರು ವಿಶಿಷ್ಟವಾಗಿ ಅಭಿನಂದನೆ ಸಲ್ಲಿಸಿದರು.

ನ್ಯೂಜೆರ್ಸಿಯ ಸಂತ ಜೋಸೆಫ್‌ ಆಸ್ಪತ್ರೆಯಲ್ಲಿ ಸೋಂಕು ಕಾಯಿಲೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಯಾಸ್ಮಿನ್‌ ಸುಲ್ತಾನ ಅವರಿಗೆ ತಮ್ಮ ಕಾರುಗಳಲ್ಲಿ ಹಾರನ್‌ ಮಾಡುತ್ತ ಬಂದ ನಾಗರಿಕರು ಕೃತಜ್ಞತೆ ಸಲ್ಲಿಸಿದರು. ಕಾರುಗಳಿಗೆ ಬಲೂನು ಕಟ್ಟಲಾಗಿತ್ತು. ‘ಥ್ಯಾಂಕ್ಯೂ’ ಎಂಬ ಭಿತ್ತಿಫಲಕಗಳನ್ನು ಕಾರಿನ ಎಡ, ಬಲ, ಹಿಂಭಾಗದಲ್ಲಿ ಅಂಟಿಸಲಾಗಿತ್ತು. ವೈದ್ಯೆಯ ಮನೆಯ ಎದುರಿನ ರಸ್ತೆಯಲ್ಲಿ ನಿಧಾನವಾಗಿ ಚಲಿಸಿದ ಕಾರುಗಳು ಪುನಃ ಅದೇ ದಾರಿಯಲ್ಲಿ ಬಂದು ಇನ್ನೊಮ್ಮೆ ವಂದನೆ ಸಲ್ಲಿಸಿದವು. ಯಾಸ್ಮಿನ್‌ ಅವರು ಕೈಮುಗಿದು ಪ್ರತಿವಂದನೆ ಸಲ್ಲಿಸಿದರು.

ಡಾ.ಯಾಸ್ಮಿನ್ ಅವರು ಮೂರು ತಿಂಗಳ ಕಾಲ ಹಗಲಿರುಳೆನ್ನದೆ ರೋಗಿಗಳ ಆರೈಕೆ ಮಾಡಿದ್ದಾರೆ. ಅವರ ಆರೈಕೆಯಲ್ಲಿ ನೂರಾರು ಮಂದಿ ಗುಣಮುಖರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.