ADVERTISEMENT

ಪ್ರವಾಸಿಗರಿಗೆ ಉಚಿತ ಲಸಿಕೆ ನೀಡಲು ಅಬುಧಾಬಿ ನಿರ್ಧಾರ

ರಾಯಿಟರ್ಸ್
Published 22 ಜೂನ್ 2021, 10:50 IST
Last Updated 22 ಜೂನ್ 2021, 10:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಯುನೈಟೆಡ್‌ ಅರಬ್‌ ಎಮಿರೆಟ್ಸ್‌ನ (ಯುಎಇ) ರಾಜಧಾನಿ ಅಬುಧಾಬಿಯು ಪ್ರವಾಸಿಗರಿಗೆ ಉಚಿತ ಲಸಿಕೆಯನ್ನು ನೀಡುವುದಾಗಿ ಹೇಳಿದೆ.

ಈ ಹಿಂದೆ ಕೇವಲ ಯುಎಇ ನಾಗರಿಕರು ಮತ್ತು ‘ರೆಸಿಡೆನ್ಸಿ ವೀಸಾ’ ಹೊಂದಿದವರಿಗೆ ಮಾತ್ರ ಉಚಿತವಾಗಿ ಲಸಿಕೆ ನೀಡಲಾಗುತ್ತಿತ್ತು. ಈ ಹೊಸ ಬದಲಾವಣೆ ಅಬುಧಾಬಿಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಇತರೆ ಐದು ಎಮಿರೆಟ್ಸ್‌ಗೆ ಅನ್ವಯಿಸುತ್ತದೆಯೇ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ.

ಅಬುಧಾಬಿ ಅನುಮೋದನೆ ನೀಡಿರುವ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರು ಉಚಿತ ಲಸಿಕೆಗೆ ಅರ್ಹರು ಎಂದು ಅಬುಧಾಬಿ ಆರೋಗ್ಯ ಸೇವೆಗಳ ಕಂಪನಿ (ಎಸ್‌ಇಎಚ್‌ಎ) ಹೇಳಿದೆ.

ADVERTISEMENT

ಅವಧಿ ಮುಗಿದ ವೀಸಾ ಮತ್ತು ರೆಸಿಡೆನ್ಸಿ ವೀಸಾ ಹೊಂದಿರುವವರು ಕೂಡ ಉಚಿತ ಲಸಿಕೆ ಪಡೆಯಲು ಅರ್ಹರು ಎಂದು ಅಬುಧಾಬಿಯ ಮಾಧ್ಯಮ ಕಚೇರಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.