ADVERTISEMENT

ಇಂಡೊನೇಷ್ಯಾ: ವ್ಯಭಿಚಾರ ಶಿಕ್ಷಾರ್ಹ ಅಪರಾಧ, ತಿದ್ದುಪಡಿ ಮಸೂದೆಗೆ ಅನುಮೋದನೆ

ಏಜೆನ್ಸೀಸ್
Published 6 ಡಿಸೆಂಬರ್ 2022, 11:19 IST
Last Updated 6 ಡಿಸೆಂಬರ್ 2022, 11:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಕಾರ್ತ, ಇಂಡೊನೇಷ್ಯಾ: ವ್ಯಭಿಚಾರವನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸುವ ತಿದ್ದುಪಡಿ ಮಸೂದೆಗೆ ಇಂಡೊನೇಷ್ಯಾ ಸಂಸತ್‌ ಮಂಗಳವಾರ ಸರ್ವಾನುಮತದ ಅನುಮೋದನೆ ನೀಡಿತು.

ವಿವಾಹೇತರ ಲೈಂಗಿಕತೆ ಶಿಕ್ಷಾರ್ಹ ಅಪರಾಧವಾಗಲಿದ್ದು, ಇದು ದೇಶದ ನಾಗರಿಕರಲ್ಲದೇ, ಇಂಡೊನೇಷ್ಯಾಕ್ಕೆ ಭೇಟಿ ನೀಡುವವರಿಗೂ ಅನ್ವಯವಾಗಲಿದೆ.

‘ಸಂಸದೀಯ ಕಾರ್ಯಪಡೆ ನವೆಂಬರ್‌ನಲ್ಲಿ ಈ ತಿದ್ದುಪಡಿ ಮಸೂದೆಯನ್ನು ಅಂತಿಮಗೊಳಿಸಿತ್ತು. ಸಂಸತ್‌ನ ಅನುಮೋದನೆ ದೊರೆತಿರುವ ಈ ಮಸೂದೆಗೆ ಅಧ್ಯಕ್ಷರು ಅಂಕಿತ ಹಾಕಬೇಕಿದೆ’ ಎಂದು ಕಾನೂನು ಮತ್ತು ಮಾನವ ಹಕ್ಕುಗಳ ಸಚಿವ ಎಡ್ವರ್ಡ್ ಹಿರೇಜ್ ತಿಳಿಸಿದ್ದಾರೆ.

ADVERTISEMENT

ಈಗ ಜಾರಿಯಲ್ಲಿರುವ ಹಳೆಯ ಕಾಯ್ದೆಯು ರದ್ದಾಗಿ, ನೂತನ ಕಾಯ್ದೆ ಜಾರಿಗೆ ಬರಲು ಕನಿಷ್ಠ ಮೂರು ವರ್ಷಗಳು ಬೇಕಾಗುತ್ತವೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.