ADVERTISEMENT

ಯುಎಇ ಮಳೆ: ಏರ್‌ ಇಂಡಿಯಾ, ಇಂಡಿಗೊ ಸೇರಿ ಭಾರತದಿಂದ ತೆರಳುವ ಹಲವು ವಿಮಾನ ರದ್ದು

ಪಿಟಿಐ
Published 18 ಏಪ್ರಿಲ್ 2024, 2:32 IST
Last Updated 18 ಏಪ್ರಿಲ್ 2024, 2:32 IST
<div class="paragraphs"><p>ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀರು ನುಗ್ಗಿರುವುದು</p></div>

ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೀರು ನುಗ್ಗಿರುವುದು

   

X ಚಿತ್ರ

ನವದೆಹಲಿ‌/ದುಬೈ: ಮರುಭೂಮಿ ದೇಶ ಯುಎಇಯಲ್ಲಿ ಈಗ ಪ್ರವಾಹ ಸ್ಥಿತಿ ಏರ್ಪಟ್ಟಿದೆ. ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯ ಪರಿಣಾಮ ಮನೆಗಳು ನೀರಿನಲ್ಲಿ ಮುಳುಗಿದ್ದು, ಜನ ಜೀವನ ಹದಗೆಟ್ಟಿದೆ. ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿದೆ.

ADVERTISEMENT

ವಿಮಾನ ನಿಲ್ದಾಣದ ರನ್‌ವೇ ನದಿಯಂತಾಗಿದ್ದು ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. ಭಾರತದಿಂದ ಸಂಚರಿಸುವ ಪ್ರಮುಖ ವಿಮಾನಗಳಾದ ಏರ್‌ ಇಂಡಿಯಾ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌, ವಿಸ್ತಾರಾ, ಇಂಡಿಗೊ, ಸ್ಪೈಸ್‌ ಜೆಟ್‌ ಸೇರಿ ಹಲವು ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. 

ಭಾರತದ ವಿವಿಧ ನಗರಗಳಿಂದ ಯುಎಇಗೆ ವಾರಕ್ಕೆ ಏರ್‌ ಇಂಡಿಯಾದ 72 ವಿಮಾನಗಳು ಹಾರಾಟ ನಡೆಸುತ್ತವೆ.

ಯುಎಇಯಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಆದಷ್ಟು ಬೇಗ ವಿಮಾನದ ವ್ಯವಸ್ಥೆ ಮಾಡಲಾಗುವುದು, ಟಿಕೆಟ್‌ಗಳನ್ನು ಕಾಯ್ದಿರಿಸದವರನ್ನು ಶೀಘ್ರ ಸಂಪರ್ಕಿಸಲಾಗುವುದು ಎಂದು ಏರ್‌ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ದುಬೈ ವಿಮಾನ ನಿಲ್ದಾಣವು 2023 ರಲ್ಲಿ ವಿಶ್ವದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ ಪ್ರಕಾರ ದುಬೈ ವಿಮಾನ ನಿಲ್ದಾಣದಲ್ಲಿ ವರ್ಷಕ್ಕೆ 8.69 ಕೋಟಿ ಪ್ರಯಾಣಿರು ಪ್ರಯಾಣ ನಡೆಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.