ADVERTISEMENT

ಅಫ್ಗಾನಿಸ್ತಾನ: ಎಂಟು ಐಎಸ್‌ ಉಗ್ರರ ಹತ್ಯೆ

ಏಜೆನ್ಸೀಸ್
Published 5 ಜನವರಿ 2023, 12:40 IST
Last Updated 5 ಜನವರಿ 2023, 12:40 IST
ಜಬಿವುಲ್ಲಾ ಮುಜಾಹಿದ್‌
ಜಬಿವುಲ್ಲಾ ಮುಜಾಹಿದ್‌   

ಇಸ್ಲಾಮಾಬಾದ್‌: ‘ಕಾಬೂಲ್‌ನಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ನ (ಐಎಸ್‌) ಎಂಟು ಉಗ್ರರು ಹತ್ಯೆಯಾಗಿದ್ದು, ಇತರೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ’ ಎಂದು ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರದ ಹಿರಿಯ ವಕ್ತಾರರೊಬ್ಬರು ಗುರುವಾರ ತಿಳಿಸಿದ್ದಾರೆ.

‘ಕಾಬೂಲ್‌ನ ಲಾಂಗನ್ ಹೋಟೆಲ್‌, ಪಾಕಿಸ್ತಾನದ ರಾಯಭಾರ ಕಚೇರಿ ಹಾಗೂ ಮಿಲಿಟರಿ ವಿಮಾನ ನಿಲ್ದಾಣಗಳಲ್ಲಿ ಈಚೆಗೆ ದಾಳಿ ನಡೆದ ಹಿನ್ನೆಲೆಯಲ್ಲಿ ಐಎಸ್‌ ಉಗ್ರರ ವಿರುದ್ಧ ರಾಜಧಾನಿ ಹಾಗೂ ಪಶ್ಚಿಮ ನಿಮ್ರೋಜ್‌ ಪ್ರಾಂತ್ಯದಲ್ಲಿ ಬುಧವಾರ ಪ್ರತ್ಯೇಕ ದಾಳಿ ನಡೆಸಲಾಯಿತು’ ಎಂದು ತಾಲಿಬಾನ್‌ ಸರ್ಕಾರದ ವಕ್ತಾರ ಜಬಿವುಲ್ಲಾ ಮುಜಾಹಿದ್‌ ಹೇಳಿದರು.

‘ಚೀನಾದ ಹೋಟೆಲ್ ಮೇಲೆ ನಡೆದ ದಾಳಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ವಿದೇಶದಿಂದ ಐಎಸ್ ಉಗ್ರರು ಅಫ್ಗಾನಿಸ್ತಾನಕ್ಕೆ ಬರಲು ದಾರಿ ಮಾಡಿಕೊಟ್ಟರು’ ಎಂದೂ ಮುಜಾಹಿದ್‌ ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.