ADVERTISEMENT

ಅಫ್ಗಾನಿಸ್ತಾನ: ವೈಮಾನಿಕ ದಾಳಿ 200ಕ್ಕೂ ಹೆಚ್ಚು ತಾಲಿಬಾನಿ ಉಗ್ರರ ಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 1:36 IST
Last Updated 8 ಆಗಸ್ಟ್ 2021, 1:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬುಲ್‌: ತಾಲಿಬಾನ್‌ ಉಗ್ರರು ಮತ್ತು ಆಫ್ಗನ್‌ ವಾಯು ಸೇನೆಯ ನಡುವೆ ದೊಡ್ಡ ಮಟ್ಟದ ಸಂಘರ್ಷ ಸಂಭವಿಸಿದ್ದು, 200ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ಅಫ್ಗಾನಿಸ್ತಾನದ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಶೆಬರ್ಗನ್‌ ನಗರದ ಜವ್ಜ್‌ಜನ್‌ ಪ್ರದೇಶದಲ್ಲಿ ತಾಲಿಬಾನ್‌ ಉಗ್ರರನ್ನು ಗುರಿಯಾಗಿಸಿಕೊಂಡು ಬಿ-52 ಬಾಂಬ್‌ ದಾಳಿ ನಡೆಸಲಾಗಿದೆ.

ಅಫ್ಗಾನಿಸ್ತಾನದ ಶೆಬರ್ಗನ್‌ ಪ್ರದೇಶದಲ್ಲಿ ಸೇನೆ ನಡೆಸಿದ ವಾಯು ದಾಳಿಗೆ 200ಕ್ಕೂ ಹೆಚ್ಚು ಉಗ್ರರು ಮೃತರಾಗಿದ್ದಾರೆ. ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ನಾಶವಾಗಿವೆ. ಉಗ್ರರ ನೂರಕ್ಕೂ ಹೆಚ್ಚು ವಾಹನಗಳು ನಾಶವಾಗಿವೆ ಎಂದು ಆಫ್ಗನ್‌ ರಕ್ಷಣಾ ಸಚಿವಾಲಯದ ಅಧಿಕಾರಿ ಫವಾದ್‌ ಅಮನ್ ಟ್ವೀಟ್‌ ಮಾಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.