ADVERTISEMENT

ಅಫ್ಗಾನಿಸ್ತಾನ ಬೆಳವಣಿಗೆ; ತಾಲಿಬಾನ್‌ ಬಗ್ಗೆ ನಮಗೆ ಯಾವುದೇ ಭ್ರಮೆಗಳಿಲ್ಲ: ಅಮೆರಿಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2021, 3:22 IST
Last Updated 24 ಆಗಸ್ಟ್ 2021, 3:22 IST
ಕಾಬೂಲ್‌ ವಿಮಾನ ನಿಲ್ದಾಣದ ದೃಶ್ಯ
ಕಾಬೂಲ್‌ ವಿಮಾನ ನಿಲ್ದಾಣದ ದೃಶ್ಯ   

ವಾಷಿಂಗ್ಟನ್:‌ ತಾಲಿಬಾನ್‌ ನಾಯಕರೊಂದಿಗೆ ಮಾತುಕತೆ ನಡೆಸುವುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮುಖ್ಯವಾಗಿ ಪರಿಗಣಿಸಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜೇಕ್‌ ಸುಲ್ಲಿವನ್‌ ತಿಳಿಸಿದ್ದಾರೆ. ಹಾಗೆಯೇ, ತಾಲಿಬಾನ್‌ ಸಂಘಟನೆ ಬಗ್ಗೆ ಅಮೆರಿಕ ಯಾವುದೇ ಭ್ರಮೆಗಳನ್ನು ಹೊಂದಿಲ್ಲ ಎಂದೂ ಹೇಳಿದ್ದಾರೆ.

ಶ್ರೇತಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಜೇಕ್‌, ತಾಲಿಬಾನ್‌ ನಾಯಕರೊಂದಿಗೆ ಅಧ್ಯಕ್ಷ ಬೈಡನ್ ಮಾತುಕತೆ ನಡೆಸುವ ಸಾಧ್ಯತೆಯಿದೆಯೇ ಎಂಬ ಬಗ್ಗೆ ಈ ಸಮಯದಲ್ಲಿ ಆಲೋಚಿಸಿಲ್ಲ ಎಂದಿದ್ದಾರೆ.

ಸದ್ಯಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ನಾಗರಿಕರ ಸ್ಥಳಾಂತರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯುಎಸ್‌ ತಾಲಿಬಾನ್‌ ಜೊತೆ ಎಂದಿನಂತೆ ಮಾತುಕತೆ ನಡೆಸಿದೆ. ಕಾಬೂಲ್‌ ವಿಮಾನ ನಿಲ್ದಾಣದಲ್ಲಿನ ಸ್ಥಿತಿಗತಿ ಸೇರಿದಂತೆ ಎಲ್ಲ ಅಂಶಗಳ ಬಗ್ಗೆಯೂ ತಾಲಿಬಾನ್‌ ನಾಯಕರೊಡನೆ ಸಮಾಲೋಚನೆ ನಡೆಸಲಾಗಿದೆʼ ಎಂದು ಹೇಳಿದ್ದಾರೆ.

ADVERTISEMENT

ಆಗಸ್ಟ್‌31ರ ಗಡುವಿನೊಳಗೆ ಅಮೆರಿಕದ ಪ್ರತಿಯೊಬ್ಬ ನಾಗರಿಕರನ್ನು ಅಫ್ಗಾನ್‌ನಿಂದ ವಾಪಸ್‌ ಕರೆಸಿಕೊಳ್ಳಲು ಸಾಕಷ್ಟು ಸಮಯವಿದೆ ಎಂದಿರುವ ಜೇಕ್,ತಾಲಿಬಾನ್‌ ಜೊತೆಗಿನ ಮಾತುಕತೆ ಹೊರತಾಗಿಯೂ, ಯುಎಸ್‌ ಪಡೆಗಳು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಸಂಘಟನೆಯಿಂದ ಗಂಭೀರ ಬೆದರಿಕೆ ಎದುರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಾಲಿಬಾನ್‌ ಬಗ್ಗೆ ಬೈಡನ್‌ ಅವರ ನಿಲುವೇನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʼಖಂಡಿತ ತಾಲಿಬಾನ್‌ ಬಗ್ಗೆ ಅವರಿಗೆ (ಬೈಡನ್‌ಗೆ) ನಂಬಿಕೆ ಇಲ್ಲ. ನಾವೂ ಸಹ ಸಂಘಟನೆಯನ್ನು ನಂಬುವುದಿಲ್ಲ. ಏಕೆಂದರೆ ತಾಲಿಬಾನ್ಕಳೆದ ಸಲ ಅಧಿಕಾರದಲ್ಲಿದ್ದಾಗಿನಭಯಾನಕ ದೃಶ್ಯಗಳನ್ನು ನೋಡಿದ್ದೇವೆ. ತಾಲಿಬಾನಿಗಳು ಈ ಬಾರಿ ಯುದ್ಧ ನಡೆಸಿದ ರೀತಿಯೂ ಹಾಗೆಯೇ ಇದೆ. ಕಳೆದ ಎರಡು ದಶಕಗಳಲ್ಲಿ ನಡೆದ ಸಂಘರ್ಷದ ವೇಳೆ ಸಂಭವಿಸಿದ ಅಮೆರಿಕದ ಪ್ರತಿಯೊಬ್ಬ ನಾಗರಿಕರ ಸಾವಿಗೆ ಸಂಘಟನೆ ಜವಾಬ್ದಾರವಾಗಿದೆʼ ಎಂದೂ ಹೇಳಿದ್ದಾರೆ.

ಮುಂದುವರಿದು, ʼನಾವು ತಾಲಿಬಾನ್‌ ಬಗ್ಗೆ ಯಾವುದೇ ಭ್ರಮೆಗಳನ್ನು ಹೊಂದಿಲ್ಲ. ನಮ್ಮ ಕೈಯಲ್ಲಿರುವ ಕಾರ್ಯದತ್ತ ಗಮನಹರಿಸಬೇಕಿದೆ. ಸಾವಿರ-ಸಾವಿರ ಸಂಖ್ಯೆಯ ಜನರನ್ನುಈದೇಶದಿಂದ (ಅಫ್ಗಾನಿಸ್ತಾನದಿಂದ) ಕರೆತರಬೇಕಿದೆʼ ಎಂದುತಿಳಿಸಿದ್ದಾರೆ.

ಬೈಡನ್‌ತಾಲಿಬಾನ್‌ ಕುರಿತು ಸೋಮವಾರ ಮಾತನಾಡಿದ್ದರು. ತಾಲಿಬಾನ್ ಬಗ್ಗೆ ನಂಬಿಕೆ ಇದೆಯೋ? ಎಲ್ಲವೋ? ಎಂದು ಕೇಳಲಾದ ಪ್ರಶ್ನೆಗೆ ʼನಾನು ಯಾರನ್ನೂ ನಂಬುವುದಿಲ್ಲʼ ಎಂದು ಪ್ರತಿಕ್ರಿಯಿಸಿದ್ದರು.

24ಕ್ಕಿಂತಲೂ ಹೆಚ್ಚು ಯುಎಸ್‌ ಸೇನಾ ವಿಮಾನಗಳು10,400 ಜನರನ್ನು ಕಳೆದ 24 ಗಂಟೆಗಳಲ್ಲಿ ಕಾಬೂಲ್‌ನಿಂದ ಸ್ಥಳಾಂತರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.