ADVERTISEMENT

ಪಾಕ್‌–ಅಫ್ಗನ್‌ ಶಾಂತಿ ಮಾತುಕತೆ ಪುನರಾರಂಭ

ಪಿಟಿಐ
Published 6 ನವೆಂಬರ್ 2025, 15:18 IST
Last Updated 6 ನವೆಂಬರ್ 2025, 15:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಅಫ್ಗನ್‌ ತಾಲಿಬಾನ್‌ ಹಾಗೂ ಪಾಕಿಸ್ತಾನದ ಅಧಿಕಾರಿಗಳು ಇಸ್ತಾನ್‌ಬುಲ್‌ನಲ್ಲಿ ಗುರುವಾರ ಶಾಂತಿ ಮಾತುಕತೆಯನ್ನು ಪುನಾರಂಭಿಸಿದ್ದಾರೆ. 

ಉಭಯ ರಾಷ್ಟ್ರಗಳ ನಡುವಿನ ವೈಮನಸ್ಸು ಮತ್ತಷ್ಟು ಉಲ್ಭಣಗೊಳ್ಳದಂತೆ ತಪ್ಪಿಸಲು ಹಾಗೂ ಗಡಿಯಾಚೆಗಿನ ಭಯೋತ್ಪಾದನೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಈ ಮಾತುಕತೆ ಮುಂದುವರಿಸಿರುವುದಾಗಿ ತಿಳಿದುಬಂದಿದೆ. 

ಅಕ್ಟೋಬರ್‌ 11ರಂದು ಪಾಕ್‌ ಹಾಗೂ ಅಫ್ಗನ್‌ ಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಎರಡೂ ಕಡೆ ಸಾವು–ನೋವು ಸಂಭವಿಸಿತ್ತು.

ADVERTISEMENT

206 ಮಂದಿ ಅಫ್ಗನ್‌ ತಾಲಿಬಾನಿಗಳು ಹಾಗೂ 110 ಮಂದಿ ತಹ್ರೀಕ್‌–ಎ–ತಾಲಿಬಾನ್‌ ಸಂಘಟನೆಯ ಸದಸ್ಯರನ್ನು ಹತ್ಯೆಗೈದಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಜತೆಗೆ ಪಾಕ್‌ನ 23 ಮಂದಿ ಸೈನಿಕರೂ ಯುದ್ಧದಲ್ಲಿ ಮೃತಪಟ್ಟಿದ್ದರು. ಅಕ್ಟೋಬರ್‌ 15ರಂದು ಕದನವಿರಾಮ ಘೋಷಿಸಲಾಗಿತ್ತು.

ಅಕ್ಟೋಬರ್‌ 18 ದೋಹಾದಲ್ಲಿ ಹಾಗೂ ಅಕ್ಟೋಬರ್‌ 25ರಂದು ಇಸ್ತಾಂಬುಲ್‌ನಲ್ಲಿ ಶಾಂತಿ ಮಾತುಕತೆ ನಡೆಸುವ ಮೂಲಕ ತಾತ್ಕಾಲಿಕ ಕದನವಿರಾಮವನ್ನು ಮುಂದುವರಿಸಲಾಗಿದೆ. ಇದೀಗ ಮೂರನೇ ಸುತ್ತಿನ ಮಾತುಕತೆ ಇಸ್ತಾನ್‌ಬುಲ್‌ನಲ್ಲಿ ನಡೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.