ADVERTISEMENT

ಆಫ್ಗನ್ ಬಿಕ್ಕಟ್ಟು: ತಜಕಿಸ್ತಾನಕ್ಕೆ ತೆರಳಿದ ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

ರಾಯಿಟರ್ಸ್
Published 15 ಆಗಸ್ಟ್ 2021, 15:25 IST
Last Updated 15 ಆಗಸ್ಟ್ 2021, 15:25 IST
ಅಶ್ರಫ್ ಘನಿ (ರಾಯಿಟರ್ಸ್ ಚಿತ್ರ)
ಅಶ್ರಫ್ ಘನಿ (ರಾಯಿಟರ್ಸ್ ಚಿತ್ರ)   

ಕಾಬೂಲ್: ಅಧ್ಯಕ್ಷ ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಅಧ್ಯಕ್ಷರ ಕಚೇರಿಯನ್ನು ಸಂಪರ್ಕಿಸಿದಾಗ, ಮಾಹಿತಿ ನೀಡಲು ನಿರಾಕರಿಸಿದೆ. ಭದ್ರತಾ ಕಾರಣಗಳಿಗಾಗಿ ಅಶ್ರಫ್ ಘನಿ ಅವರ ಕುರಿತಾದ ಮಾಹಿತಿ ನೀಡಲಾಗದು ಎಂದು ಕಚೇರಿ ಹೇಳಿದೆ.

ಘನಿ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ನಮ್ಮ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ತಾಲಿಬಾನ್‌ ವಕ್ತಾರರು ಹೇಳಿದ್ದಾರೆ.

ಅಫ್ಗಾನಿಸ್ತಾನದ ಮೇಲೆ ಬಿಗಿ ಹಿಡಿತ ಸಾಧಿಸಿರುವ ತಾಲಿಬಾನ್ ಉಗ್ರರು, ಇಂದು (ಭಾನುವಾರ) ಬೆಳಿಗ್ಗೆ ಕಾಬೂಲ್‌ ನಗರದ ಹೊರವಲಯವನ್ನು ಪ್ರವೇಶಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಅಧ್ಯಕ್ಷ ಘನಿ ಅವರು ದೇಶ ಬಿಟ್ಟು ತೆರಳಿದ್ದಾರೆ ಎಂಬ ವದಂತಿ ಹಬ್ಬಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.