ADVERTISEMENT

ತಾಲಿಬಾನ್‌ ಮೂಲಭೂತವಾದದ ಕಡುವಿರೋಧಿ ಪಾಪ್ ತಾರೆ ಅಫ್ಗಾನಿಸ್ತಾನದಿಂದ ಪಲಾಯನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2021, 6:39 IST
Last Updated 23 ಆಗಸ್ಟ್ 2021, 6:39 IST
ಆರ್ಯಾನ ಸಯೇದ್‌- ಇನ್‌ಸ್ಟಾಗ್ರಾಮ್‌ ಚಿತ್ರ
ಆರ್ಯಾನ ಸಯೇದ್‌- ಇನ್‌ಸ್ಟಾಗ್ರಾಮ್‌ ಚಿತ್ರ   

ಕಾಬೂಲ್‌ನಲ್ಲಿ ತಾಲಿಬಾನ್‌ ಅಧಿಕಾರ ಸ್ಥಾಪಿಸಿದ ನಂತರ ಪಾಪ್‌ ತಾರೆ ಆರ್ಯಾನ ಸಯೀದ್‌ ಅಫ್ಗಾನಿಸ್ತಾನವನ್ನು ತೊರೆದಿದ್ದಾರೆ.

ಅಫ್ಗಾನಿಸ್ತಾನ ಸೇನೆಗೆ ಅಮೆರಿಕ ಪಡೆಗಳ ಬೆಂಬಲ ಕ್ಷೀಣಿಸುತ್ತಿದ್ದಂತೆ ಒಂದೇ ತಿಂಗಳಲ್ಲಿ ತಾಲಿಬಾನಿಗಳು ಮತ್ತೆ ಅಧಿಕಾರ ಸ್ಥಾಪಿಸಿದ್ದಾರೆ. 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತಾಲಿಬಾನಿಗಳ ಕೈವಶವಾಗಿದೆ.

ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ ಅನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆಯೇ ತಮ್ಮ ಪತಿಯೊಂದಿಗೆ ಆರ್ಯಾನ ಸಯೀದ್‌ ದೇಶ ತೊರೆದು ಪ್ರಾಣ ಉಳಿಸಿಕೊಂಡಿದ್ದಾರೆ.

ADVERTISEMENT

'ನಾನು ಚೆನ್ನಾಗಿದ್ದೇನೆ ಮತ್ತು ಜೀವಂತವಾಗಿದ್ದೇನೆ. ಮರೆಯಲಾಗದ ಎರಡು ರಾತ್ರಿಗಳ ನಂತರ, ನಾನು ಕತಾರ್‌ನ ದೋಹಾಗೆ ಬಂದಿದ್ದೇನೆ. ಇಸ್ತಾಂಬುಲ್‌ನಲ್ಲಿರುವ ಮನೆಗೆ ಮರಳಲು ಕಾಯುತ್ತಿದ್ದೇನೆ' ಎಂದು ಆರ್ಯಾನ ಸಯೀದ್ ಇನ್‌ಸ್ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಆರ್ಯಾನ ಸಯೇದ್‌ ಅವರು ಅಫ್ಗಾನಿಸ್ತಾನದ ಜನಪ್ರಿಯ ಪಾಪ್‌ ತಾರೆಯಾಗಿದ್ದಾರೆ. ಅವರು ಆಫ್ಗಾನ್‌ ಸೇನೆಯನ್ನು ಬೆಂಬಲಿಸಿ, ತಾಲಿಬಾನ್‌ ಉಗ್ರವಾದವನ್ನು ತೀವ್ರವಾಗಿ ವಿರೋಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.