ADVERTISEMENT

ಅಫ್ಗಾನಿಸ್ತಾನ ಅಧ್ಯಕ್ಷೀಯ ಚುನಾವಣೆ: ದಾಳಿ ನಡುವೆಯೇ ಮತದಾನ

ಗಡಿಭಾಗದಲ್ಲಿ ಸಹಕರಿಸಿದ ಪಾಕಿಸ್ತಾನ

ಏಜೆನ್ಸೀಸ್
Published 28 ಸೆಪ್ಟೆಂಬರ್ 2019, 20:22 IST
Last Updated 28 ಸೆಪ್ಟೆಂಬರ್ 2019, 20:22 IST
ಜಲಾಲ್‌ಬಾದ್‌ನಲ್ಲಿ ಶನಿವಾರ ಭಾರಿ ಬಿಗಿಭದ್ರತೆಯ ನಡುವೆ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಿತು –ಎಎಫ್‌ಪಿ ಚಿತ್ರ
ಜಲಾಲ್‌ಬಾದ್‌ನಲ್ಲಿ ಶನಿವಾರ ಭಾರಿ ಬಿಗಿಭದ್ರತೆಯ ನಡುವೆ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಿತು –ಎಎಫ್‌ಪಿ ಚಿತ್ರ   

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆ ವೇಳೆ ಮತದಾನ ಕೇಂದ್ರಗಳ ಮೇಲೆ ದಾಳಿಕೋರರು ಸರಣಿ ದಾಳಿ ನಡೆಸಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾನೆ.

ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರ ಪ್ರತಿಸ್ಪರ್ಧಿ ಅಬ್ದುಲ್ಲಾ ಅಬ್ದುಲ್ಲಾ ಅವರ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇದ್ದು, ನಾಗರಿಕರು ಸ್ಫೋಟ ಮತ್ತು ದಾಳಿಗಳ ನಡುವೆಯೇ ಮತದಾನ ಮಾಡಿದರು.

ಜಲಾಲ್‌ಬಾದ್ ಮತ ಕೇಂದ್ರದ ಬಳಿ ಸಂಭವಿಸಿದ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡರು. ಕಂದಹಾರ್‌ನಲ್ಲಿ ನಡೆದ ದಾಳಿಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಗಡಿದಾಟುವ ಸ್ಥಳ ಮುಕ್ತವಾಗಿಟ್ಟ ಪಾಕ್: ಚುನಾವಣೆಯಲ್ಲಿ ಮತಚಲಾಯಿಸುವವರಿಗೆ ಅನುಕೂಲವಾಗಲೆಂದು ಪಾಕಿಸ್ತಾನ ಗಡಿದಾಟುವ ಸ್ಥಳಗಳನ್ನು ಮುಕ್ತವಾಗಿರಿಸಿತ್ತು. ಅಫ್ಗಾನಿಸ್ತಾನದ ಮನವಿ ಮೇರೆಗೆ ಈ ಕ್ರಮ ಕೈಗೊಳ್ಳಲಾಯಿತು.ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ತಕರಾರುಗಳಿದ್ದರೂ, ಚುನಾವಣೆ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನವನ್ನು ಪಾಕ್‌ ಬೆಂಬಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.