ಲಂಡನ್: ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಬ್ರಿಟಿಷ್ ಪ್ರಜೆಗಳ ಡಿಎನ್‌ಎ ಪರೀಕ್ಷೆಯ ವರದಿಗಳು ಇನ್ಣೂ ಭಾರತದಲ್ಲಿಯೇ ಎನ್ನಲಾಗಿದ್ದು ಈ ಕುರಿತು ದೃಢೀಕರಣಕ್ಕಾಗಿ ಮೃತರ ಕುಟುಂಬಗಳು ಕಾಯುತ್ತಿವೆ ಎಂದು ಮೂಲಗಳು ಹೇಳಿವೆ.
‘ಡಿಎನ್‌ಎ ಮಾದರಿಯ ಹೋಲಿಕೆ ದೃಢೀಕರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು’ ಎಂದು ಮೃತರ ಕುಟುಂಬಗಳ ಪರ ಕಾನೂನು ಸಲಹಾ ಸಂಸ್ಥೆ ಕೀಸ್ಟೋನ್ ಲಾ ಮನವಿ ಮಾಡಿದೆ.
ವಿಮಾನ ದುರಂತದಲ್ಲಿ ಮೃತಪಟ್ಟ 241 ಪ್ರಯಾಣಿಕರ ಪೈಕಿ 52 ಮಂದಿ ಬ್ರಿಟಿಷ್ ಪ್ರಜೆಗಳಿದ್ದರು. 12 ಮಂದಿ ಬ್ರಿಟಿಷ್ ಪ್ರಜೆಗಳ ಡಿಎನ್‌ಎ ಪರೀಕ್ಷೆ ನಡೆಸಿ ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಈ ಪೈಕಿ ಎರಡು ಕುಟುಂಬಗಳಿಗೆ ಬೇರೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.