ADVERTISEMENT

ರನ್‌ವೇಗೆ ಬಡಿದ ಬಾಲ: ತಿರುವನಂತಪುರದಲ್ಲಿ ಏರ್‌ ಇಂಡಿಯಾ ವಿಮಾನ ತುರ್ತು ಲ್ಯಾಂಡ್

ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

ಪಿಟಿಐ
Published 24 ಫೆಬ್ರುವರಿ 2023, 9:39 IST
Last Updated 24 ಫೆಬ್ರುವರಿ 2023, 9:39 IST
   

ತಿರುವನಂತಪುರಂ: ಕಲ್ಲಿಕೋಟೆಯಿಂದ ದಮಾಮ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ತಿರುವನಂತಪುರ ಏರ್‌ಪೋರ್ಟ್‌ನಲ್ಲಿ ತುರ್ತು ಲ್ಯಾಂಡ್‌ ಆಗಿದೆ. ಹೀಗಾಗಿ ವಿಮಾನ ನಿಲ್ದಾಣದಾದ್ಯಂತ ತುರ್ತು ಸ್ಥಿತಿ ಘೋಷಣೆ ಮಾಡಲಾಗಿದೆ. ಹೈಡ್ರಾಲಿಕ್‌ ವೈಫಲ್ಯ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ಮಧ್ಯಾಹ್ನ 12.15ರ ಸುಮಾರಿಗೆ ವಿಮಾನ ಲ್ಯಾಂಡ್‌ ಆಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

182 ಪ್ರಯಾಣಿಕರು ಇದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ IX 385 ವಿಮಾನವು ಕಲ್ಲಿಕೋಟೆ ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗುವ ವೇಳೆ ಬಾಲದ ಭಾಗವು ರನ್‌ವೇ ತಾಗಿದೆ. ಹೀಗಾಗಿ ಹೈಡ್ರಾಲಿಕ್‌ ವೈಫಲ್ಯ ಉಂಟಾಗಿರಬಹುದು ಎನ್ನಲಾಗಿದೆ.

ADVERTISEMENT

ಸುರಕ್ಷಿತ ಲ್ಯಾಂಡಿಂಗ್‌ ಉದ್ದೇಶದಿಂದ ವಿಮಾನದಲ್ಲಿದ್ದ ಇಂಧನ ಮಟ್ಟ ಕಡಿಮೆ ಮಾಡಲು, ವಿಮಾನವು 2 ಗಂಟೆಗಳ ಕಾಲ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಹಾರಾಟ ನಡೆಸಿದೆ.

ಬೆಳಗ್ಗೆ 9.44ಕ್ಕೆ ಕಲ್ಲಿಕೋಟೆಯಿಂದ ವಿಮಾನ ಟೇಕಾಫ್‌ ಆಗಿತ್ತು.

ತಿರುವನಂತಪುರದಿಂದ ದಮಾಮ್‌ಗೆ ತೆರಳಲು ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.