ADVERTISEMENT

‌ಇಂಗ್ಲೆಂಡ್‌ನಲ್ಲಿ ಕೋವಿಡ್‌ ನಿರ್ಬಂಧಗಳು ಜುಲೈ 19ಕ್ಕೆ ಅಂತ್ಯ: ಪ್ರಧಾನಿ ಜಾನ್ಸನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2021, 3:12 IST
Last Updated 13 ಜುಲೈ 2021, 3:12 IST
ಬೋರಿಸ್‌ ಜಾನ್ಸನ್‌
ಬೋರಿಸ್‌ ಜಾನ್ಸನ್‌   

ಲಂಡನ್‌: ಕೋವಿಡ್‌-19 ನಿಯಂತ್ರಣದ ಸಲುವಾಗಿ ದೇಶದಲ್ಲಿ ಹೇರಿರುವ ಎಲ್ಲ ನಿರ್ಬಂಧಗಳುಜುಲೈ 19ಕ್ಕೆ ಕೊನೆಯಾಗಲಿವೆ ಎಂದು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸೋಮವಾರ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಜಾನ್ಸನ್‌, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಅಂತರ ಕಾಯ್ದುಕೊಳ್ಳುವ ನಿಯಮ ಮತ್ತುಮನೆಯಿಂದಲೇ ಕೆಲಸ ಮಾಡುವ ಶಿಫಾರಸುಗಳನ್ನು ತೆಗೆದುಹಾಕಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾವೈರಸ್‌ ಸೋಂಕು ಹೊಂದಿರುವ ಜನರಲ್ಲಿ ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಳ್ಳದಂತೆ ತಡೆಯಲು ಲಸಿಕೆ ನೆರವಾಗಿದೆ ಎಂದೂ ಇದೇ ವೇಳೆ ಹೇಳಿದ್ದಾರೆ.

ADVERTISEMENT

ಸೋಂಕು ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಏರಿಕೆಯಾಗಬಹುದು. ಆದರೂ, ಕಳೆದ ವರ್ಷ ಸಾಂಕ್ರಾಮಿಕ ಉಲ್ಬಣವಾಗಿದ್ದ ಸಮಯಕ್ಕೆ ಹೋಲಿಸಿದರೆ ತೀರಾ ಕೆಳ ಮಟ್ಟದಲ್ಲಿರಲಿವೆ ಎಂದೂ ಬ್ರಿಟನ್‌ ಪ್ರಧಾನಿವಿಶ್ವಾಸ ವ್ಯಕ್ತಪಡಿಸಿದ್ದಾರೆ.

ʼನಾವು ತಕ್ಷಣವೇ ಸಾಮಾನ್ಯ ಸ್ಥಿತಿಗೆ ಮರಳಲಾಗದು.ಜುಲೈ 19ರಿಂದ ಮೊದಲಿನಂತೆ ಜೀವನ ನಡೆಸಲಾರಂಭಿಸಲಿದ್ದೇವೆ.ಸಾಂಕ್ರಾಮಿಕ ಇನ್ನೂ ಮುಗಿದಿಲ್ಲ, ಜನರು ಜವಾಬ್ದಾರಿಯುತವಾಗಿ ಮತ್ತು ಎಚ್ಚರಿಕೆಯಿಂದ ವರ್ತಿಸಬೇಕುʼ ಎಂದೂ ಮನವಿ ಮಾಡಿದ್ದಾರೆ.

ಆದಾಗ್ಯೂ, ಸೋಂಕು ಹರಡುತ್ತಿರುವಾಗ ನಿರ್ಬಂಧಗಳನ್ನು ತೆಗೆದುಹಾಕುವುದುಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇಂಗ್ಲೆಂಡ್‌ನಲ್ಲಿಕೊರೊನಾವೈರಸ್‌ನ ʼಡೆಲ್ಟಾʼ ರೂಪಾಂತರಿ ಪ್ರಕರಣಗಳು ಏರಿಕೆಯಾಗುತ್ತಿದ್ದು,ಇತ್ತೀಚೆಗೆ ನಿತ್ಯ30,000 ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.