ADVERTISEMENT

ಅಮೆರಿಕದ ಟೆಕ್ಸಾಸ್‌ನಲ್ಲಿ ಹಿಟ್&ರನ್: ಗುಂಟೂರು ಮೂಲದ ವಿದ್ಯಾರ್ಥಿನಿ ದುರಂತ ಸಾವು

ಆಂಧ್ರಪ್ರದೇಶದ ಗುಂಟೂರು ಮೂಲದ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಅಮೆರಿಕದಲ್ಲಿ ನಡೆದ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ಪಿಟಿಐ
Published 18 ಏಪ್ರಿಲ್ 2025, 14:51 IST
Last Updated 18 ಏಪ್ರಿಲ್ 2025, 14:51 IST
<div class="paragraphs"><p>ವಿ. ದೀಪ್ತಿ</p></div>

ವಿ. ದೀಪ್ತಿ

   

ಗುಂಟೂರು: ಆಂಧ್ರಪ್ರದೇಶದ ಗುಂಟೂರು ಮೂಲದ ಸ್ನಾತಕೋತ್ತರ ವಿದ್ಯಾರ್ಥಿನಿಯೊಬ್ಬರು ಅಮೆರಿಕದಲ್ಲಿ ನಡೆದ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

25 ವರ್ಷದ ವಿ. ದೀಪ್ತಿ ಎನ್ನುವರೇ ಮೃತ ವಿದ್ಯಾರ್ಥಿನಿ.

ADVERTISEMENT

ದೀಪ್ತಿ ಅವರು ಏಪ್ರಿಲ್ 12 ರಂದು ಟೆಕ್ಸಾಸ್‌ನ ಡೆಂಟಾನ್ ಸಿಟಿಯ ತಮ್ಮ ವಸತಿ ಪ್ರದೇಶದ ಬಳಿ ನಡೆದು ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ದೀಪ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಘಟನೆ ನಡೆದ ದಿನ ದೀಪ್ತಿ ಸ್ನೇಹಿತೆ ಸ್ನಿಗ್ದಾ ಎನ್ನುವರು ಜೊತೆಗಿದ್ದರು. ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಗುಂಟೂರಿನ ನರಸಾರಾವ್‌ಪೇಟೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪೂರೈಸಿದ್ದ ದೀಪ್ತಿ, ಉನ್ನತ ವ್ಯಾಸಂಗಕ್ಕೆ ಟೆಕ್ಸಾಸ್‌ಗೆ ತೆರಳಿದ್ದರು. ಯುನಿವರ್ಸಿಟಿ ಆಫ್ ನಾರ್ಥ್ ಟೆಕ್ಸಾಸ್‌ನಲ್ಲಿ ಎಂ.ಎಸ್ ಪದವಿ ಓದುತ್ತಿದ್ದ ದೀಪ್ತಿ ಮುಂದಿನ ತಿಂಗಳು ಪದವಿ ಮುಗಿಸಿ ಪದವಿ ಪ್ರಮಾಣಪತ್ರದೊಂದಿಗೆ ಭಾರತಕ್ಕೆ ವಾಪಸ್ ಆಗುವವರಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಸೋಮವಾರ ಏಪ್ರಿಲ್ 21 ರಂದು ಬೆಳಿಗ್ಗೆ ದೀಪ್ತಿ ಮೃತದೇಹವನ್ನು ಅಮೆರಿಕದ ತೆಲುಗು ಸಂಘದವರ ಸಹಾಯದಿಂದ ಹೈದರಾಬಾದ್‌ಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.