ADVERTISEMENT

ಕೋವಿಡ್‌: ಮೂರನೇ ಹಂತದ ಪ್ರಯೋಗಕ್ಕೆ ಮತ್ತೊಂದು ಲಸಿಕೆ

ಏಜೆನ್ಸೀಸ್
Published 27 ಮೇ 2021, 11:48 IST
Last Updated 27 ಮೇ 2021, 11:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ಯಾರಿಸ್: ಕೋವಿಡ್‌ 19ರ ಚಿಕಿತ್ಸೆಗೆ ಮತ್ತೊಂದು ಸಂಭಾವ್ಯ ಲಸಿಕೆಯ ಉತ್ಪಾದನೆಯು ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದು ಅದರ ಉತ್ಪಾದಕ ಸಂಸ್ಥೆ ಸನೋಫಿ ಮತ್ತು ಗ್ಲಾಕ್ಸೊ ಸ್ಮಿತ್‌ಕ್ಲೈನ್‌ ತಿಳಿಸಿದೆ.

ಅಮೆರಿಕ, ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕ ದೇಶಗಳಲ್ಲಿನ 35 ಸಾವಿರ ವಯಸ್ಕ ಸ್ವಯಂ ಸೇವಕರ ಮೇಲೆ ಮೂರನೇ ಹಂತದ ಪ್ರಯೋಗಕ್ಕೆ ಸಂಸ್ಥೆ ಚಾಲನೆ ನೀಡಿದೆ.

ಚೀನಾದ ವುಹಾನ್‌ನಿಂದ ಹರಡಿದ ವೈರಸ್‌ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದ ರೂಪಾಂತರಿತ ವೈರಸ್‌ ವಿರುದ್ಧ ಲಸಿಕೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಈ ಅಧ್ಯಯನದ ವೇಳೆ ಪರೀಕ್ಷಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ADVERTISEMENT

ಪ್ರಯೋಗ ಯಶಸ್ವಿಯಾದರೆ, ಇದೇ ಅಕ್ಟೋಬರ್‌ ವೇಳೆಗೆ ಲಸಿಕೆ ಬಳಕೆಗೆ ಸಿಗಬಹುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.