ADVERTISEMENT

ಅರ್ಜೆಂಟೀನಾ ಮಧ್ಯಂತರ ಚುನಾವಣೆ–ಪ್ರತಿಪಕ್ಷ ಮೇಲುಗೈ

ಏಜೆನ್ಸೀಸ್
Published 15 ನವೆಂಬರ್ 2021, 5:59 IST
Last Updated 15 ನವೆಂಬರ್ 2021, 5:59 IST
ಅರ್ಜೆಂಟೀನಾದ ಅಧ್ಯಕ್ಷ ಅಲ್ಬರ್ಟೊ ಫರ್ನಾಂಡೆಜ್‌ ಅವರು ಚುನಾವಣೆ ಬಳಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಕ್ಟೋರಿಯಾ ತೊಲೊಸಾ ಪಾಜ್‌ ಜತೆಗೆ ಕಾಣಿಸಿಕೊಂಡ ಬಗೆ  –ರಾಯಿಟರ್ಸ್‌ ಚಿತ್ರ
ಅರ್ಜೆಂಟೀನಾದ ಅಧ್ಯಕ್ಷ ಅಲ್ಬರ್ಟೊ ಫರ್ನಾಂಡೆಜ್‌ ಅವರು ಚುನಾವಣೆ ಬಳಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ವಿಕ್ಟೋರಿಯಾ ತೊಲೊಸಾ ಪಾಜ್‌ ಜತೆಗೆ ಕಾಣಿಸಿಕೊಂಡ ಬಗೆ  –ರಾಯಿಟರ್ಸ್‌ ಚಿತ್ರ   

ಬ್ಯೂನಸ್‌ ಐರಿಸ್‌: ಹಣದುಬ್ಬರ, ಬಡತನ ಹೆಚ್ಚಳದಿಂದಾಗಿ ಜನರಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅರ್ಜೆಂಟೀನಾದಲ್ಲಿ ಮಧ್ಯಂತರ ಚುನಾವಣೆ ನಡೆದಿದ್ದು, ಅಧ್ಯಕ್ಷ ಅಲ್ಬರ್ಟೊ ಫರ್ನಾಂಡೆಜ್‌ ಅವರಿಗೆ ತೀವ್ರ ಹಿನ್ನಡೆ ಉಂಟಾಗಿದೆ.

ದೇಶದ ಅತ್ಯಧಿಕ ಜನಸಂಖ್ಯೆ ಇರುವ ಪ್ರಾಂತ್ಯವಾಗಿರುವ ಬ್ಯೂನಸ್ ಐರಿಸ್‌ನಲ್ಲಿ ವಿರೋಧ ಪಕ್ಷಗಳ ಕೂಟ ಶೇ 40.1ರಷ್ಟು ಮತ ಗಳಿಸಿದ್ದರೆ, ಅಧ್ಯಕ್ಷರ ಸಮ್ಮಿಶ್ರ ಮೈತ್ರಿಕೂಟ ಶೇ 38.4ರಷ್ಟು ಮತ ಗಳಿಸಲಷ್ಟೇ ಸಫಲವಾಗಿದೆ. ಇತರ ಜಿಲ್ಲೆಗಳಲ್ಲಿ ಸಹ ವಿರೋಧ ಪಕ್ಷಗಳ ಒಕ್ಕೂಟ ಮೇಲುಗೈ ಸಾಧಿಸಿದೆ.

ಈ ಫಲಿತಾಂಶದಿಂದಾಗಿ ಅಧ್ಯಕ್ಷರ ಸಮ್ಮಿಶ್ರ ಕೂಟ ಸೆನೆಟ್‌ನಲ್ಲಿ ಹೊಂದಿದ್ದ ಬಹುಮತ ಕಳೆದುಕೊಳ್ಳಲಿದೆ. ಮುಂದಿನ ಎರಡು ವರ್ಷ ಅಧಿಕಾರ ನಡೆಸಲಿರುವ ’ಟುಗೆದರ್ ಫಾರ್‌ ಚೇಂಜ್‌‘ ಹೆಸರಿನ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಸಹ ಬಹಳ ದೊಡ್ಡ ಸವಾಲು ಎದುರಾಗಿದ್ದು, ಸಾಮಾಜಿಕ ಬಿಕ್ಕಟ್ಟು ಮತ್ತು ದೇಶವನ್ನು ಸಾಲದ ಸುಳಿಯಿಂದ ಪಾರುಮಾಡುವ ಕ್ಲಿಷ್ಟಕರ ಸನ್ನಿವೇಶ ನಿರ್ಮಾಣವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.