ADVERTISEMENT

ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಆರಿಫ್‌ಅಲ್ವಿ ಪ್ರಮಾಣ ವಚನ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 12:04 IST
Last Updated 9 ಸೆಪ್ಟೆಂಬರ್ 2018, 12:04 IST
ಆರಿಫ್‌ ಅಲ್ವಿ
ಆರಿಫ್‌ ಅಲ್ವಿ   

ಇಸ್ಲಾಮಾಬಾದ್‌: ಪಾಕಿಸ್ತಾನದ ನೂತನ ಅಧ್ಯಕ್ಷರಾಗಿ ಆರಿಫ್‌ ಅಲ್ವಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು.

ಪಾಕಿಸ್ತಾನ ತೆಹ್ರೀಕ್‌ ಎ ಇನ್ಸಾಫ್‌(ಪಿಟಿಐ) ಪಕ್ಷದ ಅಭ್ಯರ್ಥಿಆರಿಫ್‌ ಅಲ್ವಿ ಪಾಕಿಸ್ತಾನದ 13ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಐವನ್-ಎ-ಸದ್ರ್ (ಅಧ್ಯಕ್ಷರ ನಿವಾಸ) ದಲ್ಲಿ ಸರಳ ಸಮಾರಂಭ ನಡೆಯಿತು.ಮುಖ್ಯ ನ್ಯಾಯಮೂರ್ತಿ ಸಾಕ್ಬಿ ನಿಸಾರ್ ಪ್ರಮಾಣ ವಚನ ಬೋಧಿಸಿದರು.

ADVERTISEMENT

ಸಮಾರಂಭದಲ್ಲಿ ಸೇನೆಯ ಹಿರಿಯ ಅಧಿಕಾರಿಗಳು, ಪ್ರಧಾನಿ ಇಮ್ರಾನ್‌ ಖಾನ್‌, ಚೀನಾದವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಸೌದಿ ಮಾಹಿತಿ ಸಚಿವ ಆಹ್ವಾದ್ ಬಿನ್ ಸಲೆಹ್ ಅಲ್ ಅವಾಡ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.