ವಾಷಿಂಗ್ಟನ್: ಅಸ್ಟ್ರಾಜೆನೆಕಾದ ಕೋವಿಡ್–19 ಲಸಿಕೆಯ ಸ್ಥಗಿತಗೊಂಡಿರುವ ಅಂತಿಮ ಹಂತದ ಪ್ರಯೋಗಗಳು ಅಮೆರಿಕದಲ್ಲಿ ಇನ್ನೂ ಆರಂಭವಾಗಿಲ್ಲ.
ಕೋವಿಡ್ -19 ಲಸಿಕೆ ಪ್ರಯೋಗವನ್ನು ಹೇಗೆ ನಡೆಸಲಾಗುತ್ತಿದೆ ಎಂಬ ವಿವರಗಳುಳ್ಳ ಪ್ರಕಟಣೆಯನ್ನು ಅಸ್ಟ್ರಾಜೆನೆಕಾ ಶನಿವಾರ ಬಿಡುಗಡೆ ಮಾಡಿತ್ತು.
ಲಸಿಕೆಯ ಅಂತಿಮ ಹಂತದ ಪ್ರಯೋಗಗಳನ್ನು ವಾರದ ಹಿಂದೆ ಸ್ಥಗಿತಗೊಳಿಸಲಾಗಿತ್ತು. ಲಸಿಕೆ ಪ್ರಯೋಗಕ್ಕೆ ಒಳಪಟ್ಟ ಸ್ವಯಂಸೇವಕರಲ್ಲಿ ಅನೇಕರಲ್ಲಿ ಗಂಭೀರ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ. ಇದು ಲಸಿಕೆಯಿಂದಾಗಿ ಉಂಟಾಗಿರುವುದೋ ಅಥವಾ ಕಾಕತಳಿಯವೋ ಎಂಬುದರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಸಬೇಕಿದೆ ಎಂದು ಕಂಪನಿ ತಿಳಿಸಿತ್ತು.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.