ADVERTISEMENT

ಬಾಂಗ್ಲಾದೇಶದಲ್ಲಿ ನಿಗೂಢ ಸ್ಪೋಟಕ್ಕೆ 7 ಬಲಿ, ಹಲವರು ಗಂಭೀರ

ಪಿಟಿಐ
Published 28 ಜೂನ್ 2021, 3:31 IST
Last Updated 28 ಜೂನ್ 2021, 3:31 IST
ಡಾಕಾದ ಮೋಘಾಬಜಾರ್ ನಲ್ಲಿ ಸ್ಪೋಟ ಸಂಭವಿಸಿರುವುದು, ಚಿತ್ರ-ರಾಯಿಟರ್ಸ್
ಡಾಕಾದ ಮೋಘಾಬಜಾರ್ ನಲ್ಲಿ ಸ್ಪೋಟ ಸಂಭವಿಸಿರುವುದು, ಚಿತ್ರ-ರಾಯಿಟರ್ಸ್   

ಢಾಕಾ; ಇಲ್ಲಿನ ವಾಣಿಜ್ಯ ಸಂಕಿರ್ಣವೊಂದರಲ್ಲಿ ಭಾನುವಾರ ಸಂಜೆ ಸಂಭವಿಸಿದ ಭಾರಿ ಸ್ಪೋಟಕ್ಕೆ 7 ಜನ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

'ಮೋಘಾಬಜಾರ್ ನಲ್ಲಿ ಘಟನೆ ಸಂಭವಿಸಿದ್ದು, ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ' ಎಂದು ಢಾಕಾ ಪೊಲೀಸ್ ಕಮೀಷನರ್ ಶಫಿಕವುಲ್ಲಾ ಇಸ್ಲಾಂ ತಿಳಿಸಿದ್ದಾರೆ.

'ಸ್ಪೋಟದ ತೀವ್ರತೆಗೆ ಏಳು ಕಟ್ಟಡಗಳು ಜಖಂಗೊಂಡಿದ್ದು, ಹತ್ತಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ನಡೆದ ಸ್ಥಳವನ್ನು ಬಾಂಬ್ ನಿಷ್ಕ್ರಿಯ ದಳ ಹಾಗೂ ಭಯೋತ್ಪಾದನೆ ನಿಗ್ರಹ ಪಡೆ ವಶಕ್ಕೆ ಪಡೆದಿದ್ದು ಘಟನೆಗೆ ಏನು ಕಾರಣ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ' ಎಂದು ಶಫಿಕವುಲ್ಲಾ ತಿಳಿಸಿದ್ದಾರೆ.

ADVERTISEMENT

ದುರ್ಘಟನೆ ಸಂಭವಿಸಿದ ಸ್ಥಳದ ಹೋಟೆಲ್ ಒಂದರಲ್ಲಿ ಗ್ಯಾಸ್ ಲೈನ್ ಇತ್ತು. ಬಹುಶಃ ಅದು ಸ್ಪೋಟಗೊಂಡಿದೆ ಎಂದು ಕೆಲ ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.