ADVERTISEMENT

ಟೋಕಿಯೊ ಬಳಿ ಮಣ್ಣು ಕುಸಿತ: ಕನಿಷ್ಠ 19 ಮಂದಿ ನಾಪತ್ತೆ

ಏಜೆನ್ಸೀಸ್
Published 3 ಜುಲೈ 2021, 6:53 IST
Last Updated 3 ಜುಲೈ 2021, 6:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೋಕಿಯೊ: ‘ಟೋಕಿಯೊದ ಪಶ್ಚಿಮಕ್ಕಿರುವ ಪಟ್ಟಣವೊಂದರಲ್ಲಿ ಶನಿವಾರ ಸುರಿದ ಭಾರಿ ಮಳೆಯಿಂದಾಗಿ ಮಣ್ಣು ಕುಸಿದಿದೆ. ಈ ಘಟನೆಯಲ್ಲಿ ಕನಿಷ್ಠ 19 ಮಂದಿ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಅಟಾಮಿ ಪಟ್ಟಣದಇಜುಸ್‌ನಲ್ಲಿ ಶನಿವಾರ ಬೆಳಿಗ್ಗೆ ಮಣ್ಣು ಕುಸಿತ ಸಂಭವಿಸಿದೆ. ಇದರಲ್ಲಿ ಕನಿಷ್ಠ 19 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ರಕ್ಷಣಾ ಪಡೆಗಳು ಶೋಧ ನಡೆಸುತ್ತಿವೆ’ ಎಂದು ಮಧ್ಯ ಜಪಾನ್‌ನ ಶಿಜುವೊಕಾ ಪ್ರಾಂತ್ಯದ ವಿಪತ್ತು ನಿರ್ವಹಣಾ ಅಧಿಕಾರಿಟಕಾಮಿಚಿ ಸುಗಿಯಾಮಾ ಹೇಳಿದರು.

‘ಈ ಪ್ರದೇಶದಿಂದ ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಿಲ್ಲ’ ಎಂದು ಸುಗಿಯಾಮಾ ಅವರು ತಿಳಿಸಿದರು.

ADVERTISEMENT

ಈ ವಾರದ ಆರಂಭದಿಂದ ಜಪಾನ್‌ನಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಮಧ್ಯ ಟೋಕಿಯೊದ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಭೂಕುಸಿತದ ಅಪಾಯ ಹೆಚ್ಚುತ್ತಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.