ADVERTISEMENT

ಉಕ್ರೇನ್‌: ಸುಮಿಯಲ್ಲಿ ಬಾಂಬ್ ದಾಳಿ- ಇಬ್ಬರು ಮಕ್ಕಳು ಸೇರಿ ಕನಿಷ್ಠ 9 ಮಂದಿ ಸಾವು

ಏಜೆನ್ಸೀಸ್
Published 8 ಮಾರ್ಚ್ 2022, 8:06 IST
Last Updated 8 ಮಾರ್ಚ್ 2022, 8:06 IST
ಸ್ಫೋಟದಲ್ಲಿ ಧ್ವಂಸವಾದ ಸೇತುವೆ ದಾಟಿದ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಮಹಿಳೆ: ಎಎಫ್‌ಪಿ ಚಿತ್ರ
ಸ್ಫೋಟದಲ್ಲಿ ಧ್ವಂಸವಾದ ಸೇತುವೆ ದಾಟಿದ ಬಳಿಕ ವಿಶ್ರಾಂತಿ ಪಡೆಯುತ್ತಿರುವ ಮಹಿಳೆ: ಎಎಫ್‌ಪಿ ಚಿತ್ರ   

ಕೀವ್: ಉಕ್ರೇನ್‌ನ ರಾಜಧಾನಿ ಕೀವ್‌ನಿಂದ 350 ಕಿ.ಮೀ ದೂರದಲ್ಲಿರುವ ಸುಮಿ ನಗರದಲ್ಲಿ ರಷ್ಯಾ ಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ರಕ್ಷಣಾ ಕಾರ್ಯಾಚರಣೆಯ ತಂಡ ತಿಳಿಸಿದೆ.

ಸೋಮವಾರ ರಾತ್ರಿ 'ಶತ್ರು ವಿಮಾನಗಳು ಅಪಾರ್ಟ್‌ಮೆಂಟ್ ಮೇಲೆ ಕುತಂತ್ರದಿಂದ ದಾಳಿ ನಡೆಸಿವೆ’ಎಂದು ರಕ್ಷಣಾ ಕಾರ್ಯಾಚರಣೆ ತಂಡ ತಿಳಿಸಿದೆ ಎಂದು ಟೆಲಿಗ್ರಾಮ್‌ ವರದಿ ಮಾಡಿದೆ.

ರಷ್ಯಾದ ಗಡಿಯ ಸಮೀಪವಿರುವ ಸುಮಿ ನಗರದಲ್ಲಿ ಹಲವು ದಿನಗಳಿಂದ ಭಾರಿ ಹೋರಾಟ ನಡೆಯುತ್ತಿದೆ.

ADVERTISEMENT

ಈ ಮಧ್ಯೆ, ರಷ್ಯಾ– ಉಕ್ರೇನ್ ನಿಯೋಗಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ಫಲ ನೀಡುತ್ತಿಲ್ಲ.

ರಷ್ಯಾ ಮತ್ತು ಉಕ್ರೇನ್ ನಡುವೆ ಬೆಲಾರಸ್-ಪೋಲೆಂಡ್ ಗಡಿಯಲ್ಲಿ ಸುಮಾರು 3 ಗಂಟೆಗಳ ಕಾಲ ನಡೆದ ಮೂರನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ.

'ಉಭಯ ದೇಶಗಳ ನಡುವಿನ ಮಾತುಕತೆಯು ರಾಜಕೀಯ ಮತ್ತು ಮಿಲಿಟರಿ ವಿಚಾರಗಳ ಕುರಿತು ಮುಂದುವರಿದಿದೆ. ಮಾತುಕತೆಯಿಂದ ಯಾವುದೇ ಪರಿಹಾರ ಲಭ್ಯವಾಗಿಲ್ಲ. ಈಗಲೇ ಏನನ್ನೂ ಹೇಳಲಾಗುವುದಿಲ್ಲ' ಎಂದು ರಷ್ಯಾ ಅಧ್ಯಕ್ಷರ ಸಹಾಯಕ ಮತ್ತು ಮಾಸ್ಕೋ ನಿಯೋಗದ ಮುಖ್ಯಸ್ಥರೂ ಆಗಿರುವ ವ್ಲಾಡಿಮಿರ್ ಮೆಡಿನ್‌ಸ್ಕಿ ತಿಳಿಸಿದ್ದಾರೆ.

ಇದೇ ನಗರದಲ್ಲಿ ಭಾರತದ 700 ವಿದ್ಯಾರ್ಥಿಗಳು ಸಿಲುಕಿದ್ದು, ಆತಂಕಕ್ಕೆ ಕಾರಣವಾಗಿದೆ. ಭಾರತದ ನಿರಂತರ ಮನವಿ ನಡುವೆಯೂ ಈ ನಗರದಿಂದ ಇಲ್ಲಿಯವರೆಗೆ ರಕ್ಷಣಾ ಕಾರಿಡಾರ್ ಆರಂಭವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.