ADVERTISEMENT

ಪಾಕಿಸ್ತಾನ: ಮದರಸಾ ಮೇಲೆ ಬಾಂಬ್‌ ದಾಳಿ, 7 ಮಂದಿ ಸಾವು

ಏಜೆನ್ಸೀಸ್
Published 27 ಅಕ್ಟೋಬರ್ 2020, 7:15 IST
Last Updated 27 ಅಕ್ಟೋಬರ್ 2020, 7:15 IST
ವಾಯವ್ಯ ಪಾಕಿಸ್ತಾನದ ಮದರಸಾವೊಂದರ ಮೇಲೆ ಮಂಗಳವಾರ ಬಾಂಬ್‌ ದಾಳಿ ನಡೆದಿದ್ದು, ಬಾಂಬ್‌ ಸ್ಫೋಟಗೊಂಡ ಸ್ಥಳ ಪರಿಶೀಲಿಸುತ್ತಿರುವ ರಕ್ಷಣಾ ಸಿಬ್ಬಂದಿ
ವಾಯವ್ಯ ಪಾಕಿಸ್ತಾನದ ಮದರಸಾವೊಂದರ ಮೇಲೆ ಮಂಗಳವಾರ ಬಾಂಬ್‌ ದಾಳಿ ನಡೆದಿದ್ದು, ಬಾಂಬ್‌ ಸ್ಫೋಟಗೊಂಡ ಸ್ಥಳ ಪರಿಶೀಲಿಸುತ್ತಿರುವ ರಕ್ಷಣಾ ಸಿಬ್ಬಂದಿ   

ಪೆಶಾವರ: ವಾಯವ್ಯ ಪಾಕಿಸ್ತಾನದ ಮದರಸಾವೊಂದರ ಮೇಲೆ ಮಂಗಳವಾರ ಬಾಂಬ್‌ ದಾಳಿ ನಡೆದಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. 70 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪೆಶಾವರದ ಮದರಸಾದಲ್ಲಿ ಕುರಾನ್‌ ಬೋಧನೆಯ ವೇಳೆ ಈ ದಾಳಿ ನಡೆದಿದೆ. ತರಗತಿಯಲ್ಲಿ 60 ಕ್ಕೂ ಹೆಚ್ಚು ಮಕ್ಕಳಿದ್ದರು ಎಂದು ಪೊಲೀಸ್‌ ಅಧಿಕಾರಿ ವಘಾರ್‌ ಅಸೀಮ್‌ ಅವರು ತಿಳಿಸಿದರು.

ಬಾಂಬ್‌ ಸ್ಫೋಟಕ್ಕೂ ಮೊದಲು ವ್ಯಕ್ತಿಯೊಬ್ಬ ‌ಚೀಲವೊಂದನ್ನು ಹೊತ್ತುಕೊಂಡುಕುರಾನ್‌ ತರಗತಿ ನಡೆತ್ತಿದ್ದ, ಮದರಸಾದ ಸಭಾಂಗಣಕ್ಕೆ ಬಂದಿದ್ದಾನೆ. ವಾಪಸ್ ಹೋಗುವಾಗ ಆ ಚೀಲವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ‘ ಎಂದು ವಘಾರ್ ತಿಳಿಸಿಸಿದರು. ‘ಈವರೆಗೂ ದಾಳಿಯ ಹೊಣೆಯನ್ನು ಯಾವ ಸಂಘಟನೆಯು ಹೊತ್ತಿಲ್ಲ’ ಎಂದು ಅವರು ಹೇಳಿದರು.

ADVERTISEMENT

ಸ್ಫೋಟ ಸಂಭವಿಸಿದ ಸ್ಥಳದಲ್ಲಿಲ ಏಳು ಮೃತ ದೇಹಗಳು ಪತ್ತೆಯಾಗಿವೆ. 70 ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತಪಟ್ಟವರೆಲ್ಲರೂ 20 ರಿಂದ 40 ವರ್ಷದೊಳಗಿನ ಪುರುಷರು ಎಂದು ಸ್ಥಳೀಯ ಆಸ್ಪತ್ರೆಯ ವಕ್ತಾರ ಮೊಹಮ್ಮದ್‌ ವಸೀಮ್‌ ಖಾನ್‌ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.