ADVERTISEMENT

Covid-19 World Update | 1.32 ಕೋಟಿ ಸೋಂಕಿತರು ಗುಣಮುಖ; 7.66 ಲಕ್ಷ ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಆಗಸ್ಟ್ 2020, 15:21 IST
Last Updated 15 ಆಗಸ್ಟ್ 2020, 15:21 IST
   

ವಾಷಿಂಗ್ಟನ್:ಜಗತ್ತಿನಾದ್ಯಂತ 2,12,50,743 ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಇದರಲ್ಲಿ 1,32,82,593 ಸೋಂಕಿತರು ಗುಣಮುಖರಾಗಿದ್ದಾರೆ. 7,66,648 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಾನ್ಸ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯದ ಕೊರೊನಾ ಸಂಪನ್ಮೂಲ ಕೇಂದ್ರ ಮಾಹಿತಿ ನೀಡಿದೆ.

ಜಗತ್ತಿನಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗಿರುವ ಅಮೆರಿಕದಲ್ಲಿ ಈ ವರೆಗೆ 53,16,637 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 17,96,326 ಸೋಂಕಿತರು ಗುಣಮುಖರಾಗಿದ್ದು, 1,68,481ಮಂದಿ ಮೃತಪಟ್ಟಿದ್ದಾರೆ.

ಅಮೆರಿಕ ನಂತರ ಹೆಚ್ಚು ಪ್ರಕರಣಗಳು ವರದಿಯಾದ ರಾಷ್ಟ್ರಗಳ ಸಾಲಿನಲ್ಲಿರುವ ಬ್ರೆಜಿಲ್‌ನಲ್ಲಿ 32,75,520 ಪ್ರಕರಣಗಳು ಬೆಳಕಿಗೆ ಬಂದಿವೆ. 25,87,612 ಸೋಂಕಿತರು ಗುಣಮುಖರಾಗಿದ್ದು, 1,06,523 ಜನರು ಮೃತಪಟ್ಟಿದ್ದಾರೆ.

ADVERTISEMENT

ರಷ್ಯಾದಲ್ಲಿ 9,15,808, ದಕ್ಷಿಣ ಆಫ್ರಿಕಾದಲ್ಲಿ 5,79,140, ಮೆಕ್ಸಿಕೋದಲ್ಲಿ 5,11,369, ಪೆರುವಿನಲ್ಲಿ 5,16,296, ಚಿಲಿಯಲ್ಲಿ 3,82,111 ಪ್ರಕರಣಗಳು ವರದಿಯಾಗಿವೆ.

ಜಗತ್ತಿನಲ್ಲೇ ಮೊದಲು ಸೋಂಕು ಕಾಣಿಸಿಕೊಂಡ ಚೀನಾದಲ್ಲಿ ಈ ವರೆಗೆ 89,261 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 4,701 ಸೋಂಕಿತರು ಮೃತಪಟ್ಟಿದ್ದು, 83,051 ಗುಣಮುಖರಾಗಿದ್ದಾರೆ. ಇನ್ನು ಕೇವಲ 1,509 ಸಕ್ರಿಯ ಪ್ರಕರಣಗಳು ಇವೆ ಎಂದು ವರದಿಯಾಗಿದೆ.

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ 2,88,047 ಪ್ರಕರಣಗಳು ದೃಢಪಟ್ಟಿದ್ದು, 2,65,624 ಸೋಂಕಿತರು ಗುಣಮುಖರಾಗಿದ್ದಾರೆ. 6,162 ಮಂದಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.ಇಂಗ್ಲೆಂಡ್‌ನಲ್ಲಿ 3,18,193, ಸ್ಪೇನ್‌ನಲ್ಲಿ 3,42,813 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.

ಕೋವಿಡ್‌ನಿಂದಾಗಿ ಇಂಗ್ಲೆಂಡ್‌ನಲ್ಲಿ 46,791, ಮೆಕ್ಸಿಕೊದಲ್ಲಿ 55,908, ಇಟಲಿಯಲ್ಲಿ 35,234, ಫ್ರಾನ್ಸ್‌ನಲ್ಲಿ 30,410, ಸ್ಪೇನ್‌ನಲ್ಲಿ 28,617, ಪೆರುವಿನಲ್ಲಿ 25,856, ಇರಾನ್‌ನಲ್ಲಿ 19,492, ರಷ್ಯಾದಲ್ಲಿ 15,585, ಚಿಲಿಯಲ್ಲಿ 10,340 ಮತ್ತು ದಕ್ಷಿಣ ಆಫ್ರಿಕಾದಲ್ಲಿ 11,556 ಜನರು ಸಾವಿಗೀಡಾಗಿದ್ದಾರೆ.

ಭಾರತದಲ್ಲಿ ಕೋವಿಡ್–19
ಭಾರತದಲ್ಲಿ ಆಗಸ್ಟ್‌ 15ರ ವರೆಗೆ ರಾತ್ರಿ 8ರ ವರೆಗೆ ಒಟ್ಟು 25,26,192 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 18,08,936 ಮಂದಿ ಗುಣಮುಖರಾಗಿದ್ದಾರೆ. 49,036 ಸೋಂಕಿತರು ಮೃತಪಟ್ಟಿದ್ದು, 6,68,220 ಸಕ್ರಿಯ ಪ್ರಕರಣಗಳಿವೆ ಎಂದುಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.