
ಟೆಹರಾನ್: ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಅವರ ಮಗಳು, ಮೊಮ್ಮಗಳು ಹಾಗೂ ಅಳಿಯನನ್ನು ಕೂಡ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಪರಮಾಣು ಒಪ್ಪಂದಕ್ಕೆ ಒಪ್ಪಿಕೊಂಡಿಲ್ಲ ಎನ್ನುವ ಕಾರಣಕ್ಕೆ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಸೇರಿಕೊಂಡು ಶನಿವಾರ ದಾಳಿ ನಡೆಸಿದ್ದವು.
ಅಮೆರಿಕದ ‘ಆಪರೇಷನ್ ಏಪಿಕ್ ಫ್ಯೂರಿ’ಯಲ್ಲಿ 86 ವರ್ಷದ ಅಯಾತೊಲ್ಲಾ ಖಮೇನಿ ಜತೆಗೆ ಅವರ ಕುಟುಂಬಸ್ಥರು ಕೂಡ ಹತ್ಯೆಯಾಗಿದ್ದಾರೆ. ಅವರು ಹುತಾತ್ಮರಾದ ಸುದ್ದಿ ದುರದೃಷ್ಟವಶಾತ್ ದೃಢಪಟ್ಟಿದೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ‘ಫಾರ್ಸ್’ ಹಾಗೂ ಮಾಧ್ಯಮಗಳು ವರದಿ ಮಾಡಿವೆ.
ಖಮೇನಿ ಹತ್ಯೆಯ ನಂತರವೂ, ಇರಾನ್ ಅನ್ನು ಸಂಪೂರ್ಣ ವಶಕ್ಕೆ ಪಡೆಯುವವರಗೆ ನಮ್ಮ ದಾಳಿ ಮುಂದುವರಿಯುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹುತಾತ್ಮರಾಗಿರುವ ಕಾರಣ 7 ದಿನ ಸಾರ್ವಜನಿಕ ರಜೆ ಹಾಗೂ 40 ದಿನಗಳ ಕಾಲ ಮೌನಾಚರಣೆ ಮಾಡಲು ಆದೇಶಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಖಮೇನಿ ಅವರು 1989ರಿಂದ ಇರಾನ್‌ನಲ್ಲಿ ಅಧಿಕಾರದಲ್ಲಿದ್ದರು.
(ವಿವಿಧ ಸುದ್ದಿ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.