ADVERTISEMENT

ಬ್ಯಾಂಕಾಕ್‌ | ಬೌದ್ಧ ವಿಹಾರದ ಮೇಲೆ ವಾಯು ದಾಳಿ: 23 ಮಂದಿ ಬಲಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 16:49 IST
Last Updated 11 ಜುಲೈ 2025, 16:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

–ಎ.ಐ ಚಿತ್ರ

ಬ್ಯಾಂಕಾಕ್‌: ಮ್ಯಾನ್ಮಾರ್‌ನ ಮಧ್ಯ ಭಾಗದ ಸಾಗ್ಯಾಂಗ್‌ ಪ್ರಾಂತ್ಯದ ಬೌದ್ಧ ವಿಹಾರದ ಮೇಲೆ ನಡೆದ ವಾಯುದಾಳಿಯಲ್ಲಿ 23 ಮಂದಿ ಮೃತಪಟ್ಟಿದ್ದಾರೆ.

ADVERTISEMENT

‘ಲಿನ್‌ ತ–ಲು ಗ್ರಾಮದಲ್ಲಿರುವ ವಿಹಾರದ ಮೇಲೆ ರಾತ್ರಿ ವೇಳೆ ನಡೆದ ದಾಳಿಯಲ್ಲಿ 30 ಮಂದಿ ಗಾಯಗೊಂಡಿದ್ದು, ಈ ಪೈಕಿ 10 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ’ ಎಂದು ಬಂಡುಕೋರರ ಗುಂಪಿನ ಸದಸ್ಯರು ತಿಳಿಸಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ನಡೆದ ಸಂಘರ್ಷದಿಂದಾಗಿ 150ಕ್ಕೂ ಅಧಿಕ ಗ್ರಾಮಸ್ಥರು ವಿಹಾರದಲ್ಲಿ ನೆಲೆ ಪಡೆದಿದ್ದರು. ರಾತ್ರಿ 1 ಗಂಟೆ ವೇಳೆ ಯುದ್ಧ ವಿಮಾನದ ಮೂಲಕ ಬಾಂಬ್‌ ದಾಳಿ ನಡೆದಿದ್ದು, ನಾಲ್ವರು ಮಕ್ಕಳು ಸೇರಿದಂತೆ 23 ಮಂದಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

2021ರಲ್ಲಿ ಮ್ಯಾನ್ಮಾರ್‌ನಲ್ಲಿ ಅಂಗ್‌ ಸಾನ್‌ ಸೂಕಿ ನೇತೃತ್ವದ ಚುನಾಯಿತ ಸರ್ಕಾರದಿಂದ ಅಧಿಕಾರ ಕಿತ್ತುಕೊಂಡು, ಸೇನೆಯು ಆಡಳಿತ ನಡೆಸುತ್ತಿದೆ. ಇಡೀ ದೇಶದಲ್ಲಿ ದಂಗೆ ಆರಂಭವಾಗಿದ್ದು, ಪ್ರತಿರೋಧ ವ್ಯಕ್ತಪಡಿಸುವವರ ವಿರುದ್ಧ ಸೇನೆಯು ಹಿಂಸಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ದಾಳಿ ಕುರಿತು ಸೇನೆಯು ಪ್ರತಿಕ್ರಿಯಿಸಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.