ADVERTISEMENT

ರಾಷ್ಟ್ರಧ್ವಜಕ್ಕೆ ಅವಹೇಳನ: ಬಾಂಗ್ಲಾದಲ್ಲಿ ಹಿಂದೂ ಮುಖಂಡ ಕೃಷ್ಣದಾಸ್‌ಗೆ ಜಾಮೀನು

ಪಿಟಿಐ
Published 30 ಏಪ್ರಿಲ್ 2025, 9:56 IST
Last Updated 30 ಏಪ್ರಿಲ್ 2025, 9:56 IST
<div class="paragraphs"><p>ಚಿನ್ಮಯಿ ಕೃಷ್ಣದಾಸ್‌ </p></div>

ಚಿನ್ಮಯಿ ಕೃಷ್ಣದಾಸ್‌

   

(ರಾಯಿಟರ್ಸ್ ಚಿತ್ರ)

ಢಾಕಾ: ಹಿಂದೂ ಆಧ್ಯಾತ್ಮಿಕ ಮುಖಂಡ ಚಿನ್ಮಯಿ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದೇಶದ ಹೈಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದೆ.

ADVERTISEMENT

ರಾಷ್ಟ್ರಧ್ವಜವನ್ನು ಅವಹೇಳನ ಮಾಡಿದ ಆರೋಪದಡಿ ದಾಸ್‌ ಅವರನ್ನು ಢಾಕಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ನ.25ರಂದು ಬಂಧಿಸಲಾಗಿತ್ತು.

ನ್ಯಾಯಮೂರ್ತಿ ಅತಾವುರ್ ರಹಮಾನ್ ಮತ್ತು ನ್ಯಾಯಮೂರ್ತಿ ಅಲಿ ರೆಜಾ ಅವರನ್ನೊಳಗೊಂಡ ಪೀಠವು ಜಾಮೀನು ನೀಡಿದೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಾಸ್‌ ಮತ್ತು ಇತರ 18 ಮಂದಿ ಬಾಂಗ್ಲಾದೇಶದ ರಾಷ್ಟ್ರೀಯ ಧ್ವಜವನ್ನು ಅಗೌರವಗೊಳಿಸಿದ್ದಾರೆ ಎಂದು ಆರೋಪಿಸಿ ಚಟ್ಟೋಗ್ರಾಮದ ಕೊಟ್ವಾಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.