ADVERTISEMENT

ಬಾಂಗ್ಲಾದೇಶ ಆಕ್ಷೇಪದ ಬಳಿಕ ಫೇಸ್‌ಬುಕ್‌ನಲ್ಲಿ ಚಿತ್ರ ಬದಲಿಸಿದ ಪಾಕ್ ಹೈಕಮಿಷನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜುಲೈ 2022, 6:56 IST
Last Updated 24 ಜುಲೈ 2022, 6:56 IST
ಪಾಕಿಸ್ತಾನ ಧ್ವಜ
ಪಾಕಿಸ್ತಾನ ಧ್ವಜ   

ಢಾಕಾ:ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಧ್ವಜಗಳನ್ನು ಒಟ್ಟಿಗೆಸೇರಿಸಿ ಎಡಿಟ್‌ ಮಾಡಲಾದ ಚಿತ್ರವನ್ನು ಢಾಕಾದಲ್ಲಿರುವ ಪಾಕಿಸ್ತಾನ ಹೈಕಮಿಷನ್‌ ತನ್ನ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಂಡಿತ್ತು. ಈ ಬಗ್ಗೆ ಬಾಂಗ್ಲಾದೇಶ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಪಾಕ್ ಹೈಕಮಿಷನ್‌ ಚಿತ್ರವನ್ನು ಬದಲಿಸಿಕೊಂಡಿದೆ.

ಉಭಯ ದೇಶಗಳ ಧ್ವಜಗಳನ್ನು ಒಟ್ಟಿಗೆ ಸೇರಿಸಿ ಎಡಿಟ್‌ ಮಾಡಲಾದ ಚಿತ್ರವನ್ನು ಪಾಕಿಸ್ತಾನ ಹೈ ಕಮಿಷನ್‌ ತನ್ನ ಅಧಿಕೃತ ಫೇಸ್‌ಬುಕ್‌ ಪುಟದ ಕವರ್‌ ಚಿತ್ರವಾಗಿ ಕಳೆದವಾರ ಅಪ್‌ಲೋಡ್‌ ಮಾಡಿತ್ತು.ಈ ಸಂಬಂಧಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಬಳಿಕ,ಈ ಚಿತ್ರಕ್ಕೆ ಕಮೆಂಟ್‌ ಮಾಡುವ ಆಯ್ಕೆಯನ್ನು ಪಾಕಿಸ್ತಾನ ಹೈಕಮಿಷನ್‌ ನಿರ್ಬಂಧಿಸಿತ್ತು.

ಆದಾಗ್ಯೂ, ಕೆಲವು ಗುಂಪುಗಳು ಹಾಗೂ ವ್ಯಕ್ತಿಗಳುಫೇಸ್‌ಬುಕ್‌ ಪುಟದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು ಟೀಕೆ ಮುಂದುವರಿಸಿದ್ದರು. ಬಾಂಗ್ಲಾ ಧ್ವಜವನ್ನು ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿದ್ದವು.

ADVERTISEMENT

ಹೀಗಾಗಿ, ಚಿತ್ರವನ್ನು ಬದಲಿಸುವಂತೆ ಬಾಂಗ್ಲಾದೇಶದ ವಿದೇಶಾಂಗಸಚಿವಾಲಯ ಸೂಚಿಸಿತ್ತು. ಅದರಂತೆ, ಪಾಕಿಸ್ತಾನ ಹೈಕಮಿಷನ್‌, ಇಂದು (ಭಾನುವಾರ) ಬೆಳಗ್ಗೆ ಬಾಂಗ್ಲಾದೇಶ ಧ್ವಜದ ತಿರುಚಿದ ಚಿತ್ರವನ್ನು ತನ್ನ ಫೇಸ್‌ಬುಕ್ ಪುಟದಿಂದ ತೆಗೆದುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.