ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 17 ಜನರ ವಿರುದ್ಧ ವಸತಿ ಹಗರಣ ಕುರಿತ ಪ್ರಕರಣದ ವಿಚಾರಣೆ ಬುಧವಾರ ಆರಂಭವಾಗಿದೆ.
ಹಸೀನಾ ಅವರ ಸೋದರ ಸೊಸೆಯಂದಿರಾದ ಅಜ್ಮಿನಾ ಸಿದ್ದಿಕ್, ಬ್ರಿಟನ್ ಸಂಸದೆಯೂ ಆದ ತುಲಿಪ್ ಸಿದ್ದಿಕ್ ಅವರ ವಿರುದ್ಧವೂ ವಿಚಾರಣೆ ಪ್ರಾರಂಭವಾಗಿದೆ.
ಭ್ರಷ್ಟಾಚಾರ ನಿಗ್ರಹ ಆಯೋಗದ ಸಹಾಯಕ ನಿರ್ದೇಶಕರೂ ಆಗಿರುವ ದೂರುದಾರ ಅಫ್ನಾನ್ ಜನ್ನತ್ ಕೆಯಾ ಅವರು ಢಾಕಾದ ವಿಶೇಷ ನ್ಯಾಯಾಧೀಶರ ಮುಂದೆ ಸಾಕ್ಷ್ಯ ನುಡಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.