ADVERTISEMENT

ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಮುಖ್ಯೋಪಾಧ್ಯಾಯ ಅಮಾನತು

ಏಜೆನ್ಸೀಸ್
Published 11 ಫೆಬ್ರುವರಿ 2020, 17:36 IST
Last Updated 11 ಫೆಬ್ರುವರಿ 2020, 17:36 IST

ಢಾಕಾ: ಶಿಸ್ತು ಕಲಿಸುವನಿಟ್ಟಿನಲ್ಲಿ50 ವಿದ್ಯಾರ್ಥಿಗಳ ಕೂದಲು ಕತ್ತರಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ.

‘ಬಾಂಗ್ಲಾದೇಶದಬರಾಯ್‌ಗ್ರಾಮ್‌ನಲ್ಲಿರುವ ಜೋರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿಕಂದರ್‌ ಆಲಿ ಏಕಾಏಕಿ ವಿದ್ಯಾರ್ಥಿಗಳ ಕೂದಲು ಕತ್ತರಿಸಿದರು. ಆಗ ಗಾಯಗಳಾಗಿವೆ ಎಂದು ಹಲವು ವಿದ್ಯಾರ್ಥಿಗಳು ದೂರಿದ್ದಾರೆ’ ಎಂದು ಸ್ಥಳೀಯಪೊಲೀಸ್‌ ಅಧಿಕಾರಿ ದಿಲೀಪ್‌ ಕುಮಾರ್‌ ದಾಸ್‌ತಿಳಿಸಿದರು.

‘ಮುಖ್ಯೋಪಾಧ್ಯಾಯರ ನಡೆಯನ್ನು ವಿರೋಧಿಸಿ ನೂರಾರು ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಸ್ಥಳೀಯರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಮುಖ್ಯೋಪಾಧ್ಯಾಯರ ವಿರುದ್ಧ ವಿದ್ಯಾರ್ಥಿಗಳು ದಾಖಲಿಸಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.