ಸಾಂದರ್ಭಿಕ ಚಿತ್ರ
ಢಾಕಾ: ಬಾಂಗ್ಲಾದೇಶದ ನಿವೃತ್ತ ನ್ಯಾಯಮೂರ್ತಿಯೊಬ್ಬರು ಪಲಾಯನಕ್ಕೆ ಯತ್ನಿಸುತ್ತಿದ್ದ ವೇಳೆ ಈಶಾನ್ಯ ಗಡಿ ಭಾಗದ ಸಿಲೆಟ್ ಎಂಬಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ‘ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್‘ (ಬಿಜಿಬಿ) ಶುಕ್ರವಾರ ಹೇಳಿದೆ.
ಸಿಲೆಟ್‌ನ ಕನಾಯ್‌ಘಾಟ್ ಗಡಿಯಲ್ಲಿ ಭಾರತಕ್ಕೆ ಪಲಾಯನ ಮಾಡಲೆತ್ನಿಸುತ್ತಿದ್ದ ಸುಪ್ರೀಂ ಕೋರ್ಟ್‌ನ ಮೇಲ್ಮನವಿ ವಿಭಾಗದ ನಿವೃತ್ತ ನ್ಯಾಯಮೂರ್ತಿ ಸಂಶುದ್ದೀನ್ ಚೌದರಿ ಮಾಣಿಕ್‌ರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಜಿಬಿ ತಿಳಿಸಿದೆ.
ಮಧ್ಯರಾತ್ರಿವರೆಗೂ ಅವರನ್ನು ಬಿಜಿಬಿ ಔಟ್‌ಪೋಸ್ಟ್‌ನಲ್ಲಿ ಇರಿಸಲಾಗಿತ್ತು ಎಂದು ಪ್ರೋತೋಮ್ ಪತ್ರಿಕೆ ವರದಿ ಮಾಡಿದೆ.
ಮೀಸಲಾತಿ ಸಂಬಂಧ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪರಿಣಾಮ ಆಗಸ್ಟ್ 5ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.
ಆಗಸ್ಟ್ 5ರ ಬಳಿಕ, ಹಿರಿಯ ಮಂತ್ರಿಗಳು ಸೇರಿದಂತೆ ಪದಚ್ಯುತ ಆಡಳಿತದ ಹಲವಾರು ನಾಯಕರನ್ನು ಬಂಧಿಸಲಾಗಿದೆ. ಅವರಲ್ಲಿ ಬಹುತೇಕರ ಮೇಲೆ ಕೊಲೆ ಆರೋಪ ಇದೆ. ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಾಯಕರು ದಂಡು ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಸೇನೆ ಈ ಹಿಂದೆ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.