
ವಿಲ್ನಿಯಸ್: ರಷ್ಯಾ ಮಿತ್ರರಾಷ್ಟ್ರ ಬೆಲಾರೂಸ್ ಪದೇ ಪದೇ ಕಳುಹಿಸುತ್ತಿರುವ ಬಲೂನಿನಿಂದಾಗಿ ಭದ್ರತಾ ಅಪಾಯ ಉಂಟಾಗಿರುವ ಕಾರಣ ಲಿಥುವೇನಿಯಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.
‘ಬೆಲಾರೂಸ್‌ನ ದಾಳಿಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳುತ್ತೇವೆ. ದಾಳಿಯಿಂದ ಹೆಚ್ಚು ಹಾನಿಗೊಳಗಾಗಬಹುದಾದ ಪ್ರದೇಶಗಳ ಸುರಕ್ಷತೆ ಬಗ್ಗೆ ಗಮನಹರಿಸುತ್ತೇವೆ’ ಲಿಥುವೇನಿಯಾದ ಪ್ರಧಾನಿ ಇಂಗಾ ರುಜಿನೀನೆ ತಿಳಿಸಿದ್ದಾರೆ.
ನ್ಯಾಟೊ ಸದಸ್ಯ ರಾಷ್ಟ್ರವಾಗಿರುವ ಲಿಥುವೇನಿಯಾವು ಉಕ್ರೇನ್ ಅನ್ನು ಬೆಂಬಲಿಸುತ್ತಿದೆ. ಗಡಿ ವಿಚಾರಕ್ಕೆ ಸಂಬಂಧಿಸಿ ಮಾತುಕತೆಗೆ ಕರೆ ನೀಡಿರುವ ಬೆಲಾರೂಸ್ ನಾಯಕರು, ‘ನಾವು ಯುದ್ಧವನ್ನು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.
ಬಲೂನ್‌ಗಳಿಂದಾಗಿ ವಿಲ್ನಿಯಸ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅಕ್ಟೋಬರ್‌ನಿಂದ ಈವರೆಗೆ 60 ಗಂಟೆಗೂ ಅಧಿಕ ಸಮಯ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಇದರಿಂದಾಗಿ 350 ವಿಮಾನಗಳ ಹಾರಾಟ ರದ್ದಾಗಿದೆ ಮತ್ತು 51 ಸಾವಿರ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಲಿಥುವೇನಿಯಾ ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.